ತೌಕ್ತೆ ಚಂಡಮಾರುತಕ್ಕೆ ಅಜ್ಜಿ- ಮೊಮ್ಮಗ ಬಲಿ
16/05/2021
ಬೆಳಗಾವಿ: ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೌಕ್ತೆ ಚಂಡಮಾರುತದಿಂದಾಗಿ ಕರ್ನಾಟಕದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ನಿನ್ನೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ರಾದ್ದಾಂತ ಸೃಷ್ಟಿಸಿದ್ದ ಮಳೆ ಬೆಳಗಾವಿಯಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದೆ.
ಸತತವಾಗಿ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿತಗೊಂಡು ಬೆಳಗಾವಿ ತಾಲೂಕಿನ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಮನೆಯೊಂದರಲ್ಲಿ ಮಲಗಿದ್ದ ಅಜ್ಜಿ ಮತ್ತು ಮೊಮ್ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ.
55 ವರ್ಷ ವಯಸ್ಸಿನ ದೊಡ್ಡವ್ವ ಪಟ್ಟೇದ ಹಾಗೂ ಅವರ 3 ವರ್ಷದ ಮೊಮ್ಮಗ ಅಭಿಷೇಕ ಮೃತಪಟ್ಟವರಾಗಿದ್ದಾರೆ. ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯ ಸಂದರ್ಭದಲ್ಲಿ ಮನೆಯ ಗೋಡೆ ಕುಸಿತಗೊಂಡಿದೆ. ಈ ವೇಳೆ ಮನೆಯ ಗೋಡೆ ಕುಸಿತವಾಗಿದ್ದು, ಅಜ್ಜಿ ಮೊಮ್ಮಗ ಸ್ಥಳದಲ್ಲಿಯೇ ಸಾವನ್ನಪ್ಪಿ, ದೊಡ್ಡವ್ವ ಅವರ ಮಗ ಸುರೇಶ, ಸೊಸೆ ಮಂಜುಳಾ ಗಾಯಗೊಂಡಿದ್ದಾರೆ.