ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಲೆಕ್ಚರರ್ ಮಗನಿಂದಲೇ ಯುವತಿಗೆ ವಂಚನೆ - Mahanayaka
9:11 AM Wednesday 18 - September 2024

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಲೆಕ್ಚರರ್ ಮಗನಿಂದಲೇ ಯುವತಿಗೆ ವಂಚನೆ

03/02/2021

ಬೆಂಗಳೂರು: ಲೆಕ್ಚರರ್ ಒಬ್ಬರ ಮಗ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ದೈಹಿಕ ಸಂಬಂಧ ಬೆಳೆಸಿ ಇದೀಗ ವಂಚನೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು,  ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚಂದನ್ ಎಂದು ಗುರುತಿಸಲಾಗಿದೆ. ಚಂದನ್ ನ ತಾಯಿ ಲೆಕ್ಚರ್ ಆಗಿದ್ದ ಕಾಲೇಜಿನಲ್ಲಿ ಸಂತ್ರಸ್ತ ಯುವತಿ ವಿದ್ಯಾರ್ಥಿನಿಯಾಗಿದ್ದಾಳೆ. ಲೆಕ್ಚರ್ ರನ್ನು ನೋಡಲು ಅವರ ಮನೆಗೆ ಬಂದಿದ್ದ ವೇಳೆ ಚಂದನ್ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ.

ಯುವತಿಯನ್ನು ಪರಿಚಯ ಮಾಡಿಕೊಂಡ ಚಂದನ್ ಪ್ರೀತಿಯ ನಾಟಕವಾಡಿದ್ದು, ಬಳಿಕ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಪರಿಣಾಮವಾಗಿ ಎರಡು ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದ. ಇದಲ್ಲದೇ 5ರಿಂದ 6 ಲಕ್ಷ ಹಣವನ್ನು ಯುವತಿಯಿಂದ ಪಡೆದಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.


Provided by

ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿ ಚಂದನ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ