ಹಿಜಾಬ್ ಧರಿಸಬಾರದು ಎಂಬ ನಿರ್ದೇಶನ: ಹುದ್ದೆಗೆ ರಾಜೀನಾಮೆ ನೀಡಿದ ಶಿಕ್ಷಕಿ

ಹಿಜಾಬ್ ಧರಿಸಬಾರದು ಎಂಬ ನಿರ್ದೇಶನವನ್ನು ಪ್ರತಿಭಟಿಸಿ ಕೊಲ್ಕತ್ತಾದ ಲಾ ಕಾಲೇಜಿನ ಶಿಕ್ಷಕಿ ರಾಜೀನಾಮೆ ನೀಡಿದ ಘಟನೆ ತಿರುವು ಪಡೆದುಕೊಂಡಿದ್ದು ಇದೀಗ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸಬಾರದು ಎಂಬ ನಿರ್ದೇಶನವನ್ನು ಒಪ್ಪದ ಶಿಕ್ಷಕಿ ಸಂಜಿದ ಖಾದರ್ ಅವರು ರಾಜೀನಾಮೆ ನೀಡಿದ್ದರು.
ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗಿತ್ತು. ಇದೀಗ ಕಾಲೇಜು ಮುಖ್ಯಸ್ಥರು ಸ್ಪಷ್ಟೀಕರಣ ನೀಡಿದ್ದು ಅಭಿಪ್ರಾಯ ವಿನಿಮಯದ ವೇಳೆ ತಪ್ಪು ತಿಳುವಳಿಕೆಯಿಂದಾಗಿ ಈ ಘಟನೆ ನಡೆದಿದೆ, ಅಧ್ಯಾಪಕಿ ರಾಜಿನಾಮೆ ಪತ್ರವನ್ನು ವಾಪಸ್ ಪಡೆದಿದ್ದು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಂಜಿದ ಅವರು ಎಲ್ ಜೆ ಡಿ ಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇ 31ರ ಬಳಿಕ ಕಾಲೇಜಿನಲ್ಲಿ ಹಿಜಾಬ್ ಧರಿಸಬಾರದು ಎಂದು ಆಡಳಿತ ಮಂಡಳಿ ನಿರ್ದೇಶನ ನೀಡಿತ್ತು. ಇದರ ಹಿನ್ನೆಲೆಯಲ್ಲಿ ಜೂನ್ 5 ರಂದು ಸಂಜಿದ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಈ ರಾಜೀನಾಮೆ ಪ್ರಕರಣವು ಬಹಿರಂಗಕ್ಕೆ ಬಂದಂತೆ ಕಾಲೇಜ್ ಮುಖ್ಯಸ್ಥರು ಸ್ಪಷ್ಟೀಕರಣ ನೀಡುವ ಒತ್ತಡಕ್ಕೆ ಸಿಲುಕಿದ್ದಾರೆ.
ನಾವು ಹಿಜಾಬನ್ನು ನಿಷೇಧಿಸಿಲ್ಲ. ಬಟ್ಟೆಯನ್ನು ಬಳಸಿ ತಲೆಗೂದಲನ್ನು ಮುಚ್ಚುವುದಕ್ಕೆ ಅವಕಾಶ ಇದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth