ಹೀಗೂ ಇರ್ತಾರ..! 24 ವರ್ಷಗಳ ಕಾಲದ ಸೇವೆಯಲ್ಲಿ 20 ವರ್ಷ ರಜೆ ಮಾಡಿದ ಶಿಕ್ಷಕಿ: ಇವರೇ ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ..! - Mahanayaka

ಹೀಗೂ ಇರ್ತಾರ..! 24 ವರ್ಷಗಳ ಕಾಲದ ಸೇವೆಯಲ್ಲಿ 20 ವರ್ಷ ರಜೆ ಮಾಡಿದ ಶಿಕ್ಷಕಿ: ಇವರೇ ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ..!

30/06/2023

ಇವರದ್ದು 24 ವರ್ಷಗಳ ಸೇವಾವಧಿ. ನೀವು ಹೌದಾ ಅಂದ್ರೆ ಅಲ್ಲಿ ಇರುವ ವಿಚಿತ್ರವನ್ನು ನೋಡಿದ್ರೆ ನೀವು ಮತ್ತೆ ಶಾಕ್ ಆಗುತ್ತೀರಾ.  ಯೆಸ್. ತಮ್ಮ 24 ವರ್ಷಗಳ ಕಾಲದ ಸುದೀರ್ಘ ಸೇವೆಯಲ್ಲಿ ಬರೋಬ್ಬರಿ 20 ವರ್ಷ ಅನಾರೋಗ್ಯದ ನೆಪ ಹೇಳಿ ರಜೆ ಹಾಕಿರುವ ಶಿಕ್ಷಕಿಯನ್ನು ಕೊನೆಗೂ ವಜಾ ಮಾಡಲಾಗಿದೆ. ಅಲ್ಲದೆ ಇವರಿಗೆ ‘ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ’ ಎಂಬ ಪಟ್ಟವನ್ನು ನೀಡಲಾಗಿದೆ.

ಈ ಶಿಕ್ಷಕಿಯನ್ನು ಸಿಂಜಿಯಾ ಪಾವೊಲಿನಾ ಡಿಲಿಯೊ ಎಂದು ಗುರುತಿಸಲಾಗಿದೆ. ಇವರು ವೆನಿಸ್ ನಗರದ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಲಿಯೋ ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ಪಾಠ ಮಾಡಲು ತರಗತಿಗೆ ಹೋಗಿಲ್ಲ. ಮೊದಲ 10 ವರ್ಷ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು. ಉಳಿದ 14 ವರ್ಷ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ವಿಶೇಷ ಅಂದರೆ ಕರ್ತವ್ಯಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಇಟಲಿಯ ಶಿಕ್ಷಣ ಸಚಿವಾಲಯ ಹೇಳಿದೆ.

ಮಕ್ಕಳ ಪರೀಕ್ಷೆ ಸಂದರ್ಭದಲ್ಲಿಯೂ ಶಾಲೆಗೆ ರಜೆ ಹಾಕುತ್ತಿದ್ದ ಲಿಯೋ, ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಅಲ್ಲದೆ ಈ ಬಗ್ಗೆ ಆಕೆಗೆ ಮೆಸೇಜ್ ಕಳುಹಿಸಿದರೆ ಪಠ್ಯವನ್ನು ತಾವೇ ಓದುವಂತೆ ವಿದ್ಯಾರ್ಥಿಗಳನ್ನು ಗದರುತ್ತಿದ್ದಳು. ಇನ್ನು ಪರೀಕ್ಷಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ಮನಬಂದಂತೆ ಅಂಕ ನೀಡಿದ್ದಳು ಎಂದು ಆರೋಪಿಸಲಾಗಿದೆ.

ಶಿಕ್ಷಕಿಯ ಈ ವರ್ತನೆಯಿಂದ ಬೇಸತ್ತ ಶಾಲೆಯ ವಿದ್ಯಾರ್ಥಿಗಳು ಜೂನ್ 22ರಂದು ಮುಷ್ಕರ ನಡೆಸಿದ್ದರು. ಆ ಬಳಿಕ ಶಿಕ್ಷಕಿಯನ್ನು ವಜಾಗೊಳಿಸಲಾಗಿತ್ತು. ಆದರೆ ಲಿಯೋ, ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ತನ್ನ ಕೆಲಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಕೊನೆಗೆ ತೀರ್ಪನ್ನು ಮರುಪರಿಶೀಲಿಸಿದ ನ್ಯಾಯಾಲಯವು, ಶಿಕ್ಷಕಿಯ ಹಾಜರಿ ಪುಸ್ತಕ ಕಂಡು ತನ್ನ ತೀರ್ಪನ್ನು ಬದಲಿಸಿತು. ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ತಾಕೀತು ಮಾಡಿದೆ.

ಲಿಯೋ ಕಳೆದ 2 ವರ್ಷಗಳಲ್ಲಿ 67 ದಿನ ಅನಾರೋಗ್ಯ ರಜೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾಳೆ. ಅದರಲ್ಲಿ ಅಪಘಾತಗಳ ಕಾರಣದಿಂದಾಗಿ ಸುದೀರ್ಘ ರಜೆ ಜೊತೆಗೆ ತನ್ನ ಮಗುವನ್ನು ನೋಡಿಕೊಳ್ಳಲು ಮಾತೃತ್ವ ರಜೆ, ಮಗುವಿನ ಅನಾರೋಗ್ಯ, ವೃತ್ತಿಗೆ ಸಂಬಂಧಿಸಿದ ತರಬೇತಿ ಪಡೆಯಲು ರಜೆ ಇಷ್ಟು ಮಾತ್ರವಲ್ಲದೇ ಅಂಗವೈಕಲ್ಯ ಹೊಂದಿರುವ ಸಂಬಂಧಿಕರಿಗೆ ಸಹಾಯ ಮಾಡಲು ಸಹ ರಜೆಯನ್ನು ಪಡೆದಿದ್ದಳು. ಹೀಗಾಗಿ ಇಟಾಲಿಯನ್ ಸರ್ವೋಚ್ಚ ನ್ಯಾಯಾಲಯವು ಆಕೆ ಶಿಕ್ಷಕ ವೃತ್ತಿಗೆ ಯೋಗ್ಯವಾದ ವ್ಯಕ್ತಿಯಲ್ಲ ಎಂದು ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ