5 ವರ್ಷದ ಬಾಲಕಿಯ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ | ಎತ್ತ ಸಾಗುತ್ತಿದೆ ರಾಮರಾಜ್ಯ?
ಫತೇಪುರ: ಉತ್ತರ ಪ್ರದೇಶ ಜಿಲ್ಲೆಯ ಖಾಗಾ ಪ್ರದೇಶದ ಹಳ್ಳಿಯೊಂದರಲ್ಲಿ ಹದಿಗರೆಯದ ಬಾಲಕನೋರ್ವ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ 13 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಲಕಿ ತನ್ನ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆರೋಪಿ ಬಾಲಕ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ನಡೆದಾಗ ಸ್ಥಳೀಯರೇ ಪಂಚಾಯತಿ ನಡೆಸಿ ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಆದರೆ, ಇದನ್ನು ಒಪ್ಪದ ಸಂತ್ರಸ್ತೆಯ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಈ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ 13 ವರ್ಷದ ಬಾಲಕನ ಮೇಲೆ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಖಾಗಾ ಸ್ಪೇಷನ್ ಹೌಸ್ ಆಫೀಸರ್ (ಎಸ್ ಎಚ್ ಒ) ಆರ್.ಕೆ.ಸಿಂಗ್ ಹೇಳಿದ್ದಾರೆ.
ಉತ್ತರಪ್ರದೇಶ ಸದ್ಯ ಅತ್ಯಾಚಾರಿಗಳ ಅಡ್ಡಯಾಗಿದೆ. ಮಹಿಳೆ, ಮಕ್ಕಳು, ವೃದ್ಧೆಯರವರೆಗೂ ಯಾವುದೇ ಹೆಣ್ಣಿಗೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾಗಿ ಆಡಳಿತ ನಡೆಸುವ ಸಾಮರ್ಥ್ಯವಿಲ್ಲದಿದ್ದರೂ ಯೋಗಿ ಆದಿತ್ಯನಾಥ್ ಯಾವುದೇ ಮಾಧ್ಯಮಗಳ ಟೀಕೆಗೆ, ಪ್ರಶ್ನೆಗೆ ಒಳಗಾಗಿಲ್ಲದಿರುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ