ವಿಮಾನ ಟೇಕಾಫ್ ವೇಳೆ ಎಮರ್ಜೆನ್ಸಿ ಡೋರ್ ತೆಗೆದ ಸಂಸದ ತೇಜಸ್ವಿ ಸೂರ್ಯ - Mahanayaka
12:12 PM Wednesday 5 - February 2025

ವಿಮಾನ ಟೇಕಾಫ್ ವೇಳೆ ಎಮರ್ಜೆನ್ಸಿ ಡೋರ್ ತೆಗೆದ ಸಂಸದ ತೇಜಸ್ವಿ ಸೂರ್ಯ

tejasvi surya
17/01/2023

ನವದೆಹಲಿ: ವಿಮಾನ ಟೇಕಾಫ್ ವೇಳೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಡೋರ್ ತೆಗೆದ ಘಟನೆ ವರದಿಯಾಗಿದೆ.

ಒಂದು ತಿಂಗಳ ಹಿಂದೆ ಚೆನ್ನೈನಿಂದ ತಿರುಚಿರಾಪಳ್ಳಿಗೆ ಪ್ರಯಾಣಿಕನೊಬ್ಬ ಇಂಡಿಗೋ ಫ್ಲೈಟ್ 6E 7339 ರಲ್ಲಿ ATR ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ಅನ್ಲಾಕ್ ಮಾಡಿದ್ದರು ಎಂದು  ಇಂಡಿಗೋ ಏರ್‌ಲೈನ್ಸ್ ಮಂಗಳವಾರ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ತುರ್ತು ನಿರ್ಗಮನ ದ್ವಾರವನ್ನು ಅನ್ಲಾಕ್ ಮಾಡಿದ ಪ್ರಯಾಣಿಕ ತೇಜಸ್ವಿ ಸೂರ್ಯ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ  ಡಿಜಿಸಿಎ ಅಥವಾ ಇಂಡಿಗೋ ವಿಮಾನ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ತಿಳಿದು ಬಂದಿದೆ.

ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಗುರುತು ಅಥವಾ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಬೇಕಾಗಿಲ್ಲದ ಕಾರಣ ಪತ್ರಿಕಾ ಹೇಳಿಕೆಯು ಸಂಸದರನ್ನು ಹೆಸರಿಸದಿದ್ದರೂ, ಪ್ರಯಾಣಿಕರು ತಮ್ಮ ಕ್ರಮಕ್ಕಾಗಿ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ  ಡಿಜಿಸಿಎ ತನಿಖೆಗೆ ಆದೇಶಿಸಿದ್ದು, ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ