ನವೆಂಬರ್ 23ಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ವಿಚಾರಗೋಷ್ಠಿ
ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನವೆಂಬರ್ 23 ರಂದು ತೇಜಸ್ವಿ ಸಾಹಿತ್ಯ-ನುಡಿ ಸಂಭ್ರಮ ವಿಚಾರಗೋಷ್ಠಿ ನಡೆಯಲಿದೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತೇಜಸ್ವಿ ಸಾಹಿತ್ಯ-ನುಡಿ ಸಂಭ್ರಮ ವಿಚಾರಗೋಷ್ಠಿ ನಡೆಯಲಿದ್ದು ರಂಗಕರ್ಮಿಗಳು ಹಾಗೂ ರಂಗ ನಿರ್ದೇಶಕರಾದ ಪ್ರಸಾದ್ ರಕ್ಷಿದಿ ಅವರು ಕನ್ನಡ ಭಾಷಾಭಿವೃದ್ದಿಗೆ ತಂತ್ರಜ್ಞಾನದ ಪಾತ್ರ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ನಿವೃತ್ತ ಪ್ರಾಂಶುಪಾಲರಾದ ವೇಣುಗೋಪಾಲ್ ಅವರು ಕನ್ನಡ ಭಾಷಾಭಿವೃದ್ದಿಯ ಕುರಿತ ತೇಜಸ್ವಿ ಅವರ ಚಿಂತನೆಗಳು ವಿಷಯದ ಬಗ್ಗೆ ಮಾತನಾಡಲಿದ್ದಾರೆ. ನಂತರ ‘ಕನ್ನಡ ಕಟ್ಟುವ ಬಗೆ’ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ವಿಚಾರಗೋಷ್ಠಿ ಆರಂಭವಾಗಲಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು 8971964913, 9663098873 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka