ತೆಲಂಗಾಣ ಚುನಾವಣೆ: 9 ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ ಮಾಡುತ್ತೆ ಎಂದ ಅಸಾದುದ್ದೀನ್ ಒವೈಸಿ - Mahanayaka

ತೆಲಂಗಾಣ ಚುನಾವಣೆ: 9 ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ ಮಾಡುತ್ತೆ ಎಂದ ಅಸಾದುದ್ದೀನ್ ಒವೈಸಿ

03/11/2023

ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಶುಕ್ರವಾರ ಪ್ರಕಟಿಸಿದ್ದಾರೆ.


Provided by

ವಿಧಾನಸಭೆಯಲ್ಲಿ ತಮ್ಮ ಪಕ್ಷ ಪ್ರತಿನಿಧಿಸುವ ಪ್ರಸ್ತುತ ಏಳು ಸ್ಥಾನಗಳ ಜೊತೆಗೆ ಎಐಎಂಐಎಂ ರಾಜೇಂದ್ರನಗರ ಮತ್ತು ಜುಬಿಲಿ ಹಿಲ್ಸ್ ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಓವೈಸಿ ಹೇಳಿದರು.

ಓವೈಸಿ ಅವರ ಕಿರಿಯ ಸಹೋದರ ಮತ್ತು ಶಾಸಕ ಅಕ್ಬರುದ್ದೀನ್ ತಮ್ಮ ಚಂದ್ರಾಯನಗುಟ್ಟ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಎಐಎಂಐಎಂ ಅಭ್ಯರ್ಥಿಗಳು ಎಲ್ಲಿ ಸ್ಪರ್ಧಿಸಿದರೂ ಮತ್ತು ಉಳಿದ ಸ್ಥಾನಗಳಲ್ಲಿ ಬಿಆರ್ ಎಸ್ ಗೆ ಮತ ಚಲಾಯಿಸುವಂತೆ ಈಗಾಗಲೇ ಜನರಿಗೆ ಮನವಿ ಮಾಡಿದ್ದೇನೆ ಎಂದು ಹೈದರಾಬಾದ್ ಸಂಸದ ಹೇಳಿದರು. ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡಿದೆ.


Provided by

ಇತ್ತೀಚಿನ ಸುದ್ದಿ