ಕಾರಿನ ಗಾಜನ್ನ ಸ್ವಚ್ಚ ಮಾಡಿ ಹಣ ಕೇಳಿದ್ದೇ ತಪ್ಪಂತೆ: ಹಲ್ಲೆ ಮಾಡಿ ಅಮಾಯಕನ‌ ಸಾವಿಗೆ ಕಾರಣನಾದ ಸರ್ಕಾರಿ ಅಧಿಕಾರಿ - Mahanayaka
5:19 PM Saturday 21 - September 2024

ಕಾರಿನ ಗಾಜನ್ನ ಸ್ವಚ್ಚ ಮಾಡಿ ಹಣ ಕೇಳಿದ್ದೇ ತಪ್ಪಂತೆ: ಹಲ್ಲೆ ಮಾಡಿ ಅಮಾಯಕನ‌ ಸಾವಿಗೆ ಕಾರಣನಾದ ಸರ್ಕಾರಿ ಅಧಿಕಾರಿ

25/02/2024

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಟ್ರಾಫಿಕ್ ಸಿಗ್ನಲ್ ಬಳಿ ಕಾರುಗಳನ್ನು ಸ್ವಚ್ಛಗೊಳಿಸಿದ ನಂತರ ಹಣ ಕೇಳಿದ ವ್ಯಕ್ತಿಗೆ ಸರ್ಕಾರಿ ಅಧಿಕಾರಿಯೊಬ್ಬರು ಒದ್ದಿದ ಪರಿಣಾಮ ಇದ್ದಕ್ಕಿದ್ದಂತೆ ಬಂದ ಟಿಪ್ಪರ್ ಲಾರಿ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಅರ್ಮೂರ್ ಪ್ರದೇಶದ ಟ್ರಾಫಿಕ್ ಜಂಕ್ಷನ್‌ನಲ್ಲಿ ಸರ್ಕಾರಿ ಅಧಿಕಾರಿಯ ಕಾರಿನ ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ ವಾಗ್ವಾದ ಪ್ರಾರಂಭವಾಯಿತು.

ವಾಗ್ವಾದದ ನಂತರ ಸರ್ಕಾರಿ ಅಧಿಕಾರಿ ಕಾರಿನಿಂದ ಇಳಿದು ಸ್ವಚ್ಚ ಮಾಡುತ್ತಿದ್ದ ವ್ಯಕ್ತಿಗೆ ಒದ್ದಿದ್ದಾರೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರದ ಅಡಿಗೆ ಬಿದ್ದು ವ್ಯಕ್ತಿಯನ್ನು ಸಾವನ್ನಪ್ಪಿದ್ದಾರೆ.

ಸಂತ್ರಸ್ತನ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಕೊಲೆಗೆ ಸಮವಲ್ಲದ ನರಹತ್ಯೆ) ಅಡಿಯಲ್ಲಿ ಕಾರು ಚಾಲನೆ ಮಾಡುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


Provided by

ಜೊತೆಗೆ ಟಿಪ್ಪರ್ ಲಾರಿ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪರಾರಿಯಾದ ಆರೋಪಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ