ಬಿಜೆಪಿಗೆ ಸೇರಿ, ಇಡಿ, ಸಿಬಿಐ ದಾಳಿ ಆಗದಂತೆ ಬಿ.ಎಲ್.ಸಂತೋಷ್ ನೋಡಿಕೊಳ್ತಾರೆ: ಶಾಸಕ—ಸ್ವಾಮೀಜಿಯ ಆಡಿಯೋ ಲೀಕ್!
ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(TRS)ಯ ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, 15 ಕೋಟಿ ರೂಪಾಯಿ ಹಣ ಇವರಿಂದ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ದೇಶದಲ್ಲಿ ಆಪರೇಷನ್ ಕಮಲದ ಕರಾಳತೆ ಮತ್ತೊಮ್ಮೆ ಬಯಲಿಗೆ ಬಂದಿದೆ.
ಈ ನಡುವೆ ಸ್ವಾಮೀಜಿಯೊಬ್ಬರ ಆಡಿಯೋ ವೈರಲ್ ಆಗಿದ್ದು, ಈ ಆಡಿಯೋದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೆಸರು ಪ್ರಸ್ತಾಪವಾಗಿದೆ.
ಶಾಸಕ ರೋಹಿತ್ ರೆಡ್ಡಿ ಜೊತೆಗೆ ರಾಮಚಂದ್ರ ಭಾರತಿ ಎಂಬ ಸ್ವಾಮೀಜಿ ಸಂಭಾಷಣೆ ನಡೆಸಿದ್ದು, ನಾನು ಬಿ.ಎಲ್.ಸಂತೋಷ್ ಪರವಾಗಿ ಮಾತನಾಡುತ್ತಿದ್ದೇನೆ. ನೀವು ಬಿಜೆಪಿಗೆ ಸೇರಿ. ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಇಡಿ ಹಾಗೂ ಸಿಬಿಐ ದಾಳಿಗಳು ಆಗದಂತೆ ಬಿ.ಎಲ್.ಸಂತೋಷ್ ನೋಡಿಕೊಳ್ಳುತ್ತಾರೆ. ಇನ್ನಿಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ನವೆಂಬರ್ 2ರಂದು ಹೈದರಾಬಾದ್ ಗೆ ಬಂದಾಗ ಹೆಸರು ಬಹಿರಂಗಪಡಿಸುತ್ತೇನೆ ಎಂದು ಸ್ವಾಮೀಜಿ ಮಾತನಾಡಿರುವ ಆಡಿಯೋ ಲೀಕ್ ಆಗಿದೆ.
ಬಿಜೆಪಿಯು ನಾಲ್ವರು ಶಾಸಕರಿಗೆ ತಲಾ 100 ಕೋಟಿ ರೂಪಾಯಿಯ ಆಮಿಷ ಒಡ್ಡಿತ್ತು ಎಂದು ಟಿಆರ್ ಎಸ್ ಆರೋಪಿಸಿದೆ. ಆದರೆ, ಈ ಆರೋಪವನ್ನು ತೆಲಂಗಾಣ ಬಿಜೆಪಿ ತಳ್ಳಿ ಹಾಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka