ಮಹಿಳೆಯರಿಗೆ ‘ನೀನು ಒಳ್ಳೆಯ ಫಿಗರ್’ ಅನ್ನೋದು ಲೈಂಗಿಕ ಕಿರುಕುಳ!

women
05/06/2023

ಮಹಿಳಾ ಸಹೋದ್ಯೋಗಿಗೆ ‘ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಹೊರಗೆ ಬರುತ್ತೀಯಾ’ ಎಂದು ಕರೆದ ವ್ಯಕ್ತಿ ಇದೀಗ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಕೊಂಡಿದ್ದಾನೆ.

ರಿಯಲ್ ಎಸ್ಟೇಟ್ ಕಚೇರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳಾ ಸಹೋದ್ಯೋಗಿಗೆ ಅಸಿಸ್ಟೆಂಟ್ ಮ್ಯಾನೇಜರ್, ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಹೊರಗೆ ಬರುತ್ತೀಯಾ ಎಂದು ಕರೆದಿದ್ದು, ಇದರಿಂದ ನೊಂದ ಮಹಿಳಾ ಸಹೋದ್ಯೋಗಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

ಮಹಿಳೆಯ ದೂರಿನನ್ವಯ ಬಂಧನದ ಭೀತಿ ಎದುರಿಸುತ್ತಿರುವ ಅಸಿಸ್ಟೆಂಟ್ ಮ್ಯಾನೇಜರ್, ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದು, ಆದರೆ ಈ ರೀತಿ ಹೇಳಿರುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version