ದಿಲ್ಲಿಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು: ಒಂದೇ ಕಾರ್ಯಾಚರಣೆಯಲ್ಲಿ ದೇವಾಲಯ, ದರ್ಗಾ ನೆಲಸಮ ಮಾಡಿದ್ಯಾಕೆ..?
ದೆಹಲಿಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಭಾನುವಾರ ಬೆಳಿಗ್ಗೆ ಭಜನ್ಪುರ ಚೌಕ್ ನಲ್ಲಿ ಹನುಮಾನ್ ದೇವಾಲಯ ಮತ್ತು ದರ್ಗಾವನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಡೆಸಿತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಸಿಆರ್ ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಸಹರಾನ್ಪುರ ಹೆದ್ದಾರಿಗೆ ರಸ್ತೆಯನ್ನು ಅಗಲಗೊಳಿಸಲು ದೇವಾಲಯ ಮತ್ತು ದರ್ಗಾವನ್ನು ನೆಲಸಮ ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಈಶಾನ್ಯ ಡಿಸಿಪಿ ಜಾಯ್ ಎನ್ ಟಿರ್ಕಿ, ಭಜನ್ಪುರ ಚೌಕ್ ನಲ್ಲಿ ನೆಲಸಮ ಕಾರ್ಯಾಚರಣೆ ಶಾಂತಿಯುತವಾಗಿ ನಡೆಯುತ್ತಿದೆ. ಸಹರಾನ್ಪುರ ಹೆದ್ದಾರಿಗಾಗಿ ರಸ್ತೆಯನ್ನು ಮತ್ತಷ್ಟು ಅಗಲಗೊಳಿಸಲು ಹನುಮಾನ್ ದೇವಾಲಯ ಮತ್ತು ಮಜರ್ ಅನ್ನು ತೆಗೆದುಹಾಕಲು ದೆಹಲಿಯ ಧಾರ್ಮಿಕ ಸಮಿತಿಯು ನಿರ್ಧಾರ ತೆಗೆದುಕೊಂಡಿದೆ. ಎರಡೂ ಧಾರ್ಮಿಕ ಕಟ್ಟಡಗಳನ್ನು ಶಾಂತಿಯುತವಾಗಿ ತೆಗೆದುಹಾಕಲಾಗಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw