ಪಿಲಿಕುಳ ಝೂನಲ್ಲಿ ಹುಲಿಗಳ ಭೀಕರ ಕಾದಾಟ: ವೈದ್ಯರು ಚಿಕಿತ್ಸೆ ನೀಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಹುಲಿ
ಮಂಗಳೂರಿನ ಪಿಲಿಕುಳ ಝೂನಲ್ಲಿ ಎರಡು ಹುಲಿಗಳ ನಡುವೆ ಕಾದಾಟ ನಡೆದು ಹೆಣ್ಣು ಹುಲಿಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ.
ಕಾದಾಟದಿಂದ ಗಾಯಗೊಂಡಿದ್ದ 15 ವರ್ಷ ಪ್ರಾಯದ ‘ನೇತ್ರಾವತಿ’ ಹುಲಿ ಇಂದು ಸಾವನ್ನಪ್ಪಿದೆ. ‘ರೇವಾ’ ಎಂಬ 6 ವರ್ಷದ ಗಂಡು ಹುಲಿ ಮತ್ತು ನೇತ್ರಾವತಿ ನಡುವೆ ಕಾದಾಟ ನಡೆದಿದ್ದು, ಈ ವೇಳೆ ನೇತ್ರಾವತಿ ಗಾಯಗೊಂಡಿತ್ತು.
‘ರೇವಾ’ ಗಂಡು ಹುಲಿ ಬೆದೆಗೆ ಬಂದಿರುವುದರಿಂದ ನೇತ್ರಾವತಿಯ ಸಂಪರ್ಕಕ್ಕೆ ಬಂದಾಗ ಅದು ರೇವಾನ ಮೇಲೆರಗಿದೆ. ಎರಡು ಹುಲಿಗಳ ನಡುವೆ ನಡೆದ ಕಚ್ಚಾಟವನ್ನು ಸ್ಥಳದಲ್ಲಿದ್ದ ಅಧಿಕಾರಿ ಸಿಬ್ಬಂದಿ ಹತೋಟಿಗೆ ತಂದು ಗೂಡಿನ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಪಿಲಿಕುಳದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ಶುಶ್ರೂಷೆಯಿಂದ ನೇತ್ರಾವತಿಯ ಆರೋಗ್ಯ ಸುಧಾರಿಸುತ್ತಿತ್ತು. ಆದರೆ ಈ ದಿನ ಬೆಳಗ್ಗೆ ವೈದ್ಯಾಧಿಕಾರಿ ಶುಶ್ರೂಷೆ ನಿಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿತು.
ನೇತ್ರಾವತಿ (15 ವರ್ಷ) ಮತ್ತು ರೇವಾ (6 ವರ್ಷ) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿಗಳಾಗಿವೆ. ದೇಹದಲ್ಲಿ ಮೇಲ್ನೋಟಕ್ಕೆ ಗಾಯಗಳಿವೆ. ಆದರೆ ಮರಣವು ಹೋರಾಟದ ತೀವ್ರತೆಯಿಂದ ಹೃದಯಾಘಾತ ಆಗಿರಬೇಕೆಂದು ಶಂಕಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw