ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು - Mahanayaka
1:07 AM Wednesday 11 - December 2024

ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು

prathap simha
22/11/2021

ಕಲಬುರ್ಗಿ: ಸಂಸದ ಪ್ರತಾಪ್ ಸಿಂಹ ಅವರು ಪ್ರಿಯಾಂಕ್ ಖರ್ಗೆ ಬಗ್ಗೆ ನೀಡಿರುವ ಹೇಳಿಕೆ ವಾಪಸ್ ಪಡೆಯದಿದ್ದರೆ ಚಡ್ಡಿ ಬಿಚ್ಚಿಸಿ ಹೊಡೆಯುತ್ತೇವೆ ಎಂದು ಸುಲಫಲ ಮಠದ ಸ್ವಾಮೀಜಿಗಳು ನೀಡಿರುವ ಹೇಳಿಕೆಗೆ ಇದೀಗ ಆಂದೋಲನಾ ಸಿದ್ದಲಿಂಗ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ನಿಮಗೆ ತಾಕತ್ ಇದ್ದರೆ, ಸಂಸದ ಪ್ರತಾಪ್ ಸಿಂಹ ಅವರ ಚಡ್ಡಿ ಬಿಚ್ಚಿಸಿ ಹೊಡೆಯಿರಿ, ಆಗ ಮಾತ್ರ ನೀವು ಸ್ವಾಮೀಜಿ ಎಂದು ಜನ ಒಪ್ಪಿಕೊಳ್ಳುತ್ತಾರೆ ಎಂದು  ಸಿದ್ದಲಿಂಗ ಸ್ವಾಮೀಜಿ ತಿರುಗೇಟು ನೀಡಿದ್ದಾರೆ ಎಂದು ವರದಿಯಾಗಿದೆ.

ಸುಲಫಲ ಮಠದ ಮಠದ ಸ್ವಾಮೀಜಿ ತಮ್ಮ ಹೇಳಿಕೆಗೆ ತಕ್ಷಣವೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿರುವ ಅವರು, ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮೀಜಿ ಎಂಬ ಖ್ಯಾತಿಗೆ ನೀವು ಒಳಗಾಗಿದ್ದಾರೆ. ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು, ಆಗ ಎಲ್ಲಿ ಹೋಗಿದ್ದಿರಿ ಎಂದು ಅವರು ಪ್ರಶ್ನಿಸಿದರು.

ರಾಜಕಾರಣಿಗಳನ್ನು ಬೆಂಬಲಿಸಿಕೊಂಡು ಸ್ವಾಮೀಜಿಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವುದು, “ಸ್ವಾಮೀಜಿಗಳು ರಾಜಕೀಯದೊಳಗೋ, ರಾಜಕೀಯ ಸ್ವಾಮೀಜಿಗಳೊಳಗೋ” ಎಂದು ಸಾರ್ವಜನಿಕರು ಪ್ರಶ್ನಿಸುವಂತಹ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ