ಡಿಬೆಟ್ ಗೆ ಬನ್ನಿ, ನನ್ನ ಹಿಂದುತ್ವ ಏನು ಅಂತ ಬೋಧನೆ ಮಾಡುತ್ತೇನೆ | ದೀಪು ಶೆಟ್ಟಿಗಾರ್ ಸವಾಲು - Mahanayaka
7:30 PM Thursday 12 - December 2024

ಡಿಬೆಟ್ ಗೆ ಬನ್ನಿ, ನನ್ನ ಹಿಂದುತ್ವ ಏನು ಅಂತ ಬೋಧನೆ ಮಾಡುತ್ತೇನೆ | ದೀಪು ಶೆಟ್ಟಿಗಾರ್ ಸವಾಲು

deepu shettigar
16/11/2021

ಮಂಗಳೂರು: ನನಗೆ ಹಿಂದುತ್ವದ ಪಾಠ ಯಾರಿಂದಲೂ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಹಿಂದುತ್ವವನ್ನು ಯಾವುದೇ ಪಕ್ಷಕ್ಕೆ ಏಜೆಂಟ್ ತರ ಬಿಟ್ಟುಕೊಟ್ಟಿಲ್ಲ. ಧರ್ಮದ ವಿಷಯದಲ್ಲಿ ಯಾವುದೇ ಪಕ್ಷದವರು ಮಾತನಾಡಿದಾಗ ಅದಕ್ಕೆ ಸರಿಯಾಗಿ ಅವರಿಗೆ ನ್ಯೂಸ್ ಚಾನೆಲ್ ಗಳ ಡಿಬೆಟ್ ನಲ್ಲಿ ಉತ್ತರ ಕೊಟ್ಟಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಹೇಳಿದ್ದಾರೆ.

ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಶರಣ್ ಪಂಪ್ ವೆಲ್ ಅವರು ಅವಹೇಳನಾಕಾರಿಯಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದ ದೀಪು ಶೆಟ್ಟಿಗಾರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆತ್ತಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಉತ್ತರಿಸಿದ ಅವರು,  ಕಾಂಗ್ರೆಸ್ ಸರಕಾರ ಇದ್ದಾಗ ನನ್ನನ್ನು ಬಿಜೆಪಿ ಅಂತಲೂ ಬಿಂಬಿಸಿದ್ದಾರೆ , ಈಗ ಬಿಜೆಪಿ ಸರ್ಕಾರ ಇದ್ದಾಗ ನನ್ನನ್ನು ಕಾಂಗ್ರೆಸ್ ಅಂತಲೂ ಬಿಂಬಿಸುವುದು ಸಹಜ. ಯಾಕೆಂದರೆ ನನ್ನ ಧ್ವನಿ ಸಾಮಾನ್ಯ ಜನರ ಪರವಾಗಿ ಹೊರತು ರಾಜಕೀಯ ಬಕೆಟ್ ಗಳ ಪರವಾಗಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ವೈಯಕ್ತಿಕವಾಗಿ ನಮ್ಮ ಸಂಘಟನೆಯ ಬಗ್ಗೆ ಒಬ್ಬರು ಕೊಟ್ಟ ಹೇಳಿಕೆಯನ್ನು ಹಿಡಿದುಕೊಂಡು ಅದಕ್ಕೆ ಪ್ರತ್ಯುತ್ತರ ಕೊಟ್ಟದ್ದಕ್ಕೆ ನನ್ನ ಹಿಂದುತ್ವದ ಬಗ್ಗೆ ಉಳಿದ ಕಾಂಜಿಪಿಂಜಿಗಳು ಮಾತನಾಡುವಂತಹ ಅವಶ್ಯಕತೆ ಇಲ್ಲ. ಯಾಕೆಂದರೆ ಇದು ಧರ್ಮದ ವಿರುದ್ಧ ಹೋರಾಟ ಅಲ್ಲ, ನಮ್ಮ ಸಂಘಟನೆಯ ಬಗ್ಗೆ ತಿಳಿಯದೆ ಒಬ್ಬರು ನೀಡಿರುವ ಹೇಳಿಕೆಯ ವಿರುದ್ದ. ಆ ವ್ಯಕ್ತಿಯನ್ನು ಮೆಚ್ಚಿಸಲು ಧರ್ಮವನ್ನು ಎದುರು ತಂದು ಉಳಿದವರ ದಾರಿ ತಪ್ಪಿಸುವ ಅವಶ್ಯಕತೆಯಿಲ್ಲ ಎಂದು ಅವರು ಹೇಳಿದರು.

ನಾನು ನಮ್ಮ ದೈವ-ದೇವರುಗಳ ಸಾಕ್ಷಿಯಾಗಿ ಹಿಂದೂ ಧರ್ಮಕ್ಕೆ ತಲೆಬಾಗಿ ನಡೆಯುತ್ತಿದ್ದೇನೆ ಎಂದು ಪ್ರಮಾಣ ಮಾಡುತ್ತೇನೆ ಈ ರೀತಿ ಪ್ರಮಾಣ ಮಾಡುವ ಧೈರ್ಯ ಪೋಸ್ಟ್ ಹಾಕಿದ ಕಾಂಜಿಪಿಂಜಿಗಳಿಗೆ ಇದೆಯೇ? ಈಗ ಯಾವುದೇ ರಾಜಕೀಯ ಪಕ್ಷವನ್ನು ಮೆಚ್ಚಿಸಲು ನನ್ನ ಹಿಂದುತ್ವದ ಪ್ರಶ್ನೆ ಮಾಡುವವ ಗಂಡಸಾದರೆ ಎದುರು ನ್ಯೂಸ್ ಚಾನಲ್ ಗೆ ಬಂದು ಡಿಬೇಟ್ ಅಲ್ಲಿ ಮಾತನಾಡು.  ನನ್ನ ಹಿಂದುತ್ವ ಏನು ಅಂತ ನಿನಗೆ ನಾನು ಬೋಧನೆ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಕಂಗನಾ ಹೇಳಿದ್ದನ್ನು ಮುಸ್ಲಿಮ್ ವ್ಯಕ್ತಿ ಹೇಳಿದ್ದರೆ, ಮೊಣಕಾಲಿಗೆ ಗುಂಡಿಟ್ಟು ಜೈಲಿಗಟ್ಟಲಾಗುತ್ತಿತ್ತು | ಓವೈಸಿ

ಇಂದು ಪುನೀತ್ ನಮನ: ಸ್ಟಾರ್ ನಟರು ಭಾಗಿಯಾಗುವ ಸಾಧ್ಯತೆ | ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ!

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ದಂಪತಿಯ ದಾರುಣ ಸಾವು

ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು!

ಪತ್ನಿಯ ಕಣ್ಣೆದುರೇ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಚ್ಚಿ ಬರ್ಬರ ಹತ್ಯೆ!

ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು | ಕ್ಷಮೆಯಾಚಿಸಿದ ಹಂಸಲೇಖ

ಇತ್ತೀಚಿನ ಸುದ್ದಿ