ತಲಪತಿ ವಿಜಯ್ ಅವರ “ಲಿಯೋ” ಚಿತ್ರಕ್ಕೆ ಸಂಕಷ್ಟ: ಡ್ರಗ್ಸ್ ವೈಭವೀಕರಣದ ಗಂಭೀರ ಆರೋಪ
ತಲಪತಿ ವಿಜಯ್ ಅವರ 2023ರ ಬಹುನಿರೀಕ್ಷಿತ ಚಿತ್ರ ‘ಲಿಯೋ’ ಚಿತ್ರಕ್ಕೆ ಸಂಕಷ್ಟ ಎದುರಾಗಿದ್ದು, ಆರ್ ಟಿಐ ಕಾರ್ಯಕರ್ತರೊಬ್ಬರು ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ.
ಲೋಕೇಶ್ ಕನಗರಾಜ್ ನಿರ್ದೇಶಕನದ ಈ ಚಿತ್ರವು ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ. ಜೂನ್ 22ರಂದು ನಟ ವಿಜಯ್ ಅವರು ತಮ್ಮ 49ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದ ವೇಳೆ ಲಿಯೋ ಚಿತ್ರದ “ನಾ ರೆಡಿ” ಎಂಬ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡು ಇದೀಗ ಸೂಪರ್ ಹಿಟ್ ಆಗಿದೆ. ಈ ನಡುವೆ ಚಿತ್ರದಲ್ಲಿ ಡ್ರಗ್ಸ್ ವೈಭವೀಕರಣ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಚೆನ್ನೈನ ಕೊರುಕ್ಕುಪ್ಪೇಟ್ಟೈ ಠಾಣೆಯಲ್ಲಿ ಆರ್ ಟಿಐ ಕಾರ್ಯಕರ್ತ ಸೆಲ್ವಂ ಅವರು ಲಿಯೋ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಡ್ರಗ್ಸ್ ಹಾಗೂ ರೌಡಿಸಂಗೆ ಚಿತ್ರದಲ್ಲಿ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw