ತಾಲಿಬಾನ್ ನ 10ಕ್ಕೂ ಅಧಿಕ ಉಗ್ರರಿಗೆ ಚಟ್ಟಕಟ್ಟಿದ ಅಫ್ಘಾನ್ ನ ಪಂಜ್ ಶೇರ್ ಚಳುವಳಿಗಾರರು
ಕಾಬೂಲ್: ತಾಲಿಬಾನ್ ಉಗ್ರರಿಗೆ ವಿರುದ್ಧವಾಗಿ ಪಂಜ್ ಶೇರ್ ಪ್ರದೇಶದಲ್ಲಿ ತಾಲಿಬಾನ್ ವಿರೋಧಿ ಆಂದೋಲನವು ನಡೆಯುತ್ತಿದ್ದು, ತಾಲಿಬಾನ್ ಉಗ್ರರಿಗೆ ಅವರದ್ದೇ ಆದ ಶೈಲಿಯಲ್ಲಿ ಪಂಜ್ ಶೇರ್ ಗಳು ಉತ್ತರ ನೀಡುತ್ತಿದ್ದು, ಇದೀಗ ತಾಲಿಬಾನ್ ಉಗ್ರರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.
ತಾಲಿಬಾನಿಗಳು ವಶಪಡಿಸಿಕೊಂಡಿದ್ದ ಹೋರಾಟಗಾರರ ಎರಡನೇ ಗುಂಪುಗಳು ಹತ್ತಾರು ತಾಲಿಬಾನ್ ಉಗ್ರರನ್ನು ಕೊಂದು ಸಲಾಹ್ ಮತ್ತು ಬಾನು ಜಿಲ್ಲೆಗಳನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಇಲ್ಲಿನ ಮುಖಂಡರು ಹೇಳಿಕೊಂಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿಂದೆ ಚೀನಾ, ಅಮೆರಿಕ, ರಷ್ಯಾ ಹಾಗೂ ಪಾಕಿಸ್ತಾನ ರಾಷ್ಟ್ರಗಳ ಕೈವಾಡವಿದ್ದು, ಇಲ್ಲಿ ಇಸ್ಲಾಮ್ ತತ್ವವನ್ನು ಹೇರಲು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಂಬಿಸಿ, ಅಫ್ಘಾನಿಸ್ತಾನದಲ್ಲಿರುವ ಅಪಾರ ಪ್ರಮಾಣದ ಖನಿಜ ಸಂಪತ್ತನ್ನು ದೋಚಲು ಈ ರಾಷ್ಟ್ರಗಳು ಪ್ಲಾನ್ ಮಾಡಿವೆ ಎಂದು ಹೇಳಲಾಗುತ್ತಿದೆ. ಇದೀಗ ಪಂಜ್ ಶೇರ್ ನ ಚಳುವಳಿಗಾರರು ತಾಲಿಬಾನ್ ಹಾಗೂ ಇತರ ರಾಷ್ಟ್ರಗಳ ಕೃತ್ಯವನ್ನು ವಿಫಲಗೊಳಿಸಲು ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ.
ವಾರಾಂತ್ಯದಲ್ಲಿ ತಾಲಿಬಾನ್ ವಿರೋಧಿ ಚಳುವಳಿಗಾರರು ಪುಲ್-ಎ-ಹಿಸಾರ್ ಪ್ರದೇಶವನ್ನು ಮರಳಿ ಪಡೆಯುವುದರೊಂದಿಗೆ, ಪಂಜ್‌ಶೇರ್‌ನ ಉತ್ತರದಲ್ಲಿರುವ ಬಾಗ್ಲಾನ್ ಪ್ರಾಂತ್ಯದ ಕನಿಷ್ಠ ಮೂರು ಜಿಲ್ಲೆಗಳು ಸೋವಿಯತ್ ವಿರೋಧಿ ಹೋರಾಟದ ನಾಯಕ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಪಡೆಗಳ ವಶದಲ್ಲಿವೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸುದ್ದಿಗಳು…
ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್
ಸಿಎಂ ಭೇಟಿಗೆ ದೇವಸ್ಥಾನದಿಂದಲೇ ಬಂದ ದೇವಿ | ಕೊನೆಗೆ ನಡೆದದ್ದೇನು ಗೊತ್ತಾ?
ಶಾಕಿಂಗ್ ನ್ಯೂಸ್: ಮಗುವಿಗೆ ಜನ್ಮ ನೀಡಿದ 12 ವರ್ಷ ವಯಸ್ಸಿನ ಬಾಲಕಿ
ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್ | 6 ವರ್ಷಗಳ ಕಾಲ ಅನರ್ಹರಾಗುವ ಸಾಧ್ಯತೆ
ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?
ಫುಡ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರು ಸಜೀವ ದಹನ
ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು