ತಾಲಿಬಾನಿಗಳಿಗೂ ಬಿಜೆಪಿಗೂ ವ್ಯತ್ಯಾಸವೇನಿಲ್ಲ ಎಂದ ಕಾಂಗ್ರೆಸ್ - Mahanayaka
3:30 PM Wednesday 5 - February 2025

ತಾಲಿಬಾನಿಗಳಿಗೂ ಬಿಜೆಪಿಗೂ ವ್ಯತ್ಯಾಸವೇನಿಲ್ಲ ಎಂದ ಕಾಂಗ್ರೆಸ್

thaliban bjp
18/08/2021

ಬೆಂಗಳೂರು: ಯಾದಗಿರಿಯಲ್ಲಿ ಬಿಜೆಪಿ ಯಾತ್ರೆಯ ಸಂದರ್ಭದಲ್ಲಿ ತಾಲಿಬಾನ್ ಉಗ್ರರಂತೆ ಬಂದೂಕು ಹಿಡಿದು ಗುಂಡು ಹಾರಿಸಿದ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿಯೇ ಇಂತಹದ್ದೊಂದು ಮೂರ್ಖತನದ ಪರಮಾವಧಿಯನ್ನು ಮೆರೆದಿರುವ ಬಿಜೆಪಿ ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆ ನಡೆದ ಬಳಿಕ ಗುಂಡು ಹಾರಿಸಿದ ವ್ಯಕ್ತಿಗಳನ್ನು ಮಾತ್ರವೇ ಬಂಧಿಸಲಾಗಿದೆ. ಆದರೆ ಗುಂಡು ಹಾರಿಸಲು ಕಾರ್ಯಕರ್ತರ ಬಳಿಯಲ್ಲಿ ಹೇಳಿರುವ ಬಿಜೆಪಿ ಮುಖಂಡರು ಮಾತ್ರ ಸೇಫ್ ಆಗಿದ್ದಾರೆ. ಬಂದೂಕಿನೊಂದಿಗೆ ಸ್ವಾಗತ ನೀಡುವ ಕಾರ್ಯಕ್ರಮದ ಪ್ರಯೋಜಕರು ಯಾರು? ಎನ್ನುವ ಪ್ರಶ್ನೆಗಳ ನಡುವೆಯೇ ಯಾರೋ ಹೇಳಿದರು ಎಂದು ಗುಂಡು ಹಾರಿಸಿದ ಅಮಾಯಕರನ್ನು ಒಳಗೆ ತಳ್ಳಿ, ಕಾರ್ಯಕ್ರಮದ ಆಯೋಜಕರನ್ನು ರಕ್ಷಿಸಲಾಗುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ.

ಇನ್ನೂ ಈ ಘಟನೆ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ತಾಲಿಬಾನ್ ಸಂಸ್ಕೃತಿ ಅನಾವರಣಗೊಂಡಿದೆ, ಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲದೆ ತಾಲಿಬಾನ್ ಉಗ್ರರಂತೆ ಬಂದುಕಿನಿಂದ ಗುಂಡು ಹಾರಿಸಿ ತನ್ನ ಭಯೋತ್ಪಾದಕ ಮನಸ್ಥಿತಿಯನ್ನು ನಿರೂಪಿಸಿದೆ ತಾಲಿಬಾನಿಗಳಿಗೂ ಬಿಜೆಪಿಗೂ ವ್ಯತ್ಯಾಸವೇನಿಲ್ಲ! ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಬಿಜೆಪಿ ಉಗ್ರರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.

ಇನ್ನಷ್ಟು ಸುದ್ದಿಗಳು…

ತನ್ನ ಬಗ್ಗೆ ತಾನೇ ಪುಸ್ತಕ ಬರೆದುಕೊಂಡು ಸ್ವಾತಂತ್ರ್ಯ ಹೋರಾಟಗಾರನಾದ ಸಾರ್ವರ್ಕರ್ | ಶಾಫಿ ಬೆಳ್ಳಾರೆ

ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಅಫ್ಘಾನಿಸ್ತಾನ ಸಂಕಷ್ಟದ ಬೆನ್ನಲ್ಲೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಬಂಧಿತ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್

ಇತ್ತೀಚಿನ ಸುದ್ದಿ