ತಾಲಿಬಾನಿಗಳ ವಿರುದ್ಧ ಸಿಡಿದೆದ್ದ ಅಮ್ರುಲ್ಲಾ ಸಾಲೇಹ್ ಯಾರು? | ಜೈಲಿನಲ್ಲಿ ತಾಲಿಬಾನಿಗರ ದಂಗೆಯನ್ನು ಇವರು ಎದುರಿಸಿದ್ದು ಹೇಗೆ?
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಾಲೇಹ್ ಪಂಜಶಿರ್ ಪ್ರಾಂತ್ಯದ ಹೋರಾಟಗಾರರೊಂದಿಗೆ ಸೇರಿಕೊಂಡಿದ್ದಾರೆ. ಈಗಾಗಲೇ ಅವರು ತಾನು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದು, ತಾಲಿಬಾನಿಗಳಿಗೆ ನಾನು ಶರಣಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಆರಂಭವಾಗುತ್ತಿದ್ದಂತೆಯೇ ದೇಶದ ಪ್ರಮುಖ ನಾಯಕರೆಲ್ಲ ದೇಶ ತೊರೆದು ಹೇಡಿಗಳಂತೆ ಓಡಿ ಹೋಗಿದ್ದರೆ, ಅಮ್ರುಲ್ಲಾ ಸಾಲೇಹ್ ಮಾತ್ರ ತಾಲಿಬಾನಿಗಳ ವಿರುದ್ಧ ಹೋರಾಡಿ ಜಯಿಸುವ ಭರವಸೆಯೊಂದಿಗೆ ತಮ್ಮ ಮನೆಯಿಂದ ಪಂಜಶಿರ್ ಗೆ ತೆರಳಿದ್ದಾರೆ.
ಇನ್ನೂ ದೇಶದ ಅಧ್ಯಕ್ಷ ಸೇರಿದಂತೆ ಪ್ರಮುಖ ಸಚಿವರು ದೇಶ ಬಿಟ್ಟು ಓಡಿ ಹೋಗಿ ಅಫ್ಘಾನಿಸ್ತಾನದ ಮಣ್ಣಿಗೆ ದ್ರೋಹ ಬಗೆದಿದ್ದಾರೆ ಎಂದು ಅಮ್ರುಲ್ಲಾ ಸಾಲೇಹ್ ಹೇಳಿದ್ದಾರೆ. ಕಾಬುಲ್ ತಾಲಿಬಾನಿಗಳ ವಶವಾಗುವುದಕ್ಕೂ ಮುನ್ನದಿನ ರಾತ್ರಿ ಪೊಲೀಸ್ ಮುಖ್ಯಸ್ಥರು ನನಗೆ ಕರೆ ಮಾಡಿ, ಜೈಲಿನಲ್ಲಿ ದಂಗೆ ಎದ್ದಿದೆ ಎಂದರು. ತಾಲಿಬಾನಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ನಾನು ಆಗಲೇ ಆ್ಯಂಟಿ ತಾಲಿಬಾನಿ ಕೈದಿ ಪಡೆಯನ್ನು ಸಿದ್ಧಮಾಡಿ ಜೈಲಿನಲ್ಲಿಯೇ ತಾಲಿಬಾನಿಗಳನ್ನು ನಿಯಂತ್ರಿಸಿದೆ ಎಂದರು.
ಪಂಜಶಿರ್ ಕಮಾಂಡರ್ ಆಗಿರುವ ಅಹ್ಮದ್ ಮಸೂರ್ ತಂದೆ ನನಗೆ ಮಾರ್ಗದರ್ಶಕರಾಗಿದ್ದವರು. ಅವರು ತಾಲಿಬಾನಿಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಿರುವುದು ತಿಳಿದು ನಾನು ಮಸೂರ್ ಗೆ ಕರೆ ಮಾಡಿದೆ. ಕಾಬುಲ್ ತೊರೆದು ಹೋಗುವ ವೇಳೆ ನನ್ನ ಬಾಡಿಗಾರ್ಡ್ ಗೆ ಹೇಳಿದೆ. ಅಲ್ಲೆಲ್ಲ ತಾಲಿಬಾನ್ ಉಗ್ರರಿದ್ದಾರೆ. ಒಂದು ವೇಳೆ ಅವರ ದಾಳಿಯಿಂದ ನಾನು ಗಾಯಗೊಂಡರೆ, ನನ್ನ ತಲೆಗೆ ಇನ್ನೆರಡು ಗುಂಡು ಹೊಡೆದು ಕೊಂದು ಬಿಡು ಎಂದಿದ್ದೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ | ರೈತ ನಾಯಕರಿಂದ ಎಚ್ಚರಿಕೆ
ಕಾಂಗ್ರೆಸ್ ನವರು ಚಳುವಳಿ ಮಾಡುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿಲ್ಲ | ಸಿ.ಟಿ.ರವಿ ಹೇಳಿಕೆ
ಗಣೇಶೋತ್ಸವಕ್ಕೆ ಷರತ್ತು ಬದ್ಧ ಅವಕಾಶ | ಸಂಘಟಕರು ಈ ನಿಯಮಗಳನ್ನು ಪಾಲಿಸಲೇ ಬೇಕು!
ತಡರಾತ್ರಿ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ!
ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ಅಪರಾಧಿಗೆ ಮರಣದಂಡನೆ
ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರ ನನಗಿಲ್ಲ, 2023ರ ಚುನಾವಣೆಗಾಗಿ ಕಾಯುತ್ತಿದ್ದೇನೆ | ಬಿ.ವೈ.ವಿಜಯೇಂದ್ರ