ತಮಿಳುನಾಡಿನ ಆಳ ಅರಿಯದೇ ಕಾಲಿಟ್ಟ “ತಂಬಿ” ತೇಜಸ್ವಿ ಸೂರ್ಯಗೆ ಭಾರೀ ಮುಜುಗರ! - Mahanayaka
5:42 PM Thursday 14 - November 2024

ತಮಿಳುನಾಡಿನ ಆಳ ಅರಿಯದೇ ಕಾಲಿಟ್ಟ “ತಂಬಿ” ತೇಜಸ್ವಿ ಸೂರ್ಯಗೆ ಭಾರೀ ಮುಜುಗರ!

tejaswi surya
03/04/2021

ಬೆಂಗಳೂರು: ಯಾವಾಗಲೂ ವಿವಾದವನ್ನೇ ಬೆನ್ನಿಗೆ ಕಟ್ಟಿಕೊಂಡು ನಡೆಯುವ ತೇಜಸ್ವಿ ಸೂರ್ಯ ತಮಿಳುನಾಡಿನ ಸೌಹಾರ್ದಯುತ ಜೀವನವನ್ನು ಅರಿಯದೇ ತಮಿಳುನಾಡಿಗೆ ಕಾಲಿಟ್ಟಿದ್ದು, ಅಲ್ಲಿ ಒಂದು ಹೊಟೇಲ್ ನಲ್ಲಿ ತನ್ನಿಂದ ಹಣ ತೆಗೆದುಕೊಳ್ಳಲು ಹಿಂಜರಿದರು ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೋಗಿ ಇದೀಗ ಮುಜುಗರ ಅನುಭವಿಸಿದ್ದಾರೆ.

ತಮಿಳುನಾಡಿಗೆ ಹೋದಾಗ ಅಲ್ಲಿನ ಅನ್ನಪೂರ್ಣ ಎಂಬ ಹೆಸರಿನ ಹೊಟೇಲ್ ಗೆ ಹೋದಾಗ ನಡೆದ ಘಟನೆಯನ್ನು ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ಇಂದು ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಾಹಾರದ ನಂತರ, ನಾನು ಸಹಜವಾಗಿ ಬಿಲ್ ಪಾವತಿಸಲು ಹೋದೆ. ಕ್ಯಾಷಿಯರ್ ಹಣವನ್ನು ಸ್ವೀಕರಿಸಲು ಹಿಂಜರಿದರು. ಒತ್ತಾಯದ ನಂತರ ಬಹಳ ಹಿಂಜರಿಕೆಯಿಂದಲೇ ಹಣ ಸ್ವೀಕರಿಸಲು ಒಪ್ಪಿಕೊಂಡರು. ಆಗ ನಾನು ಅವರಿಗೆ, ನಾವು ಬಿಜೆಪಿಯವರು. ನಮ್ಮದು ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ. ಸಣ್ಣ ವ್ಯಾಪಾರಿಗಳಿಂದಲೂ ರೋಲ್-ಕಾಲ್ ಮಾಡಲು ಡಿಎಂಕೆಯಂತೆ ನಾವಲ್ಲ  ಎಂದೆ  ಎಂದು ಬರೆದುಕೊಂಡಿದ್ದರು.

ತೇಜಸ್ವಿ ಸೂರ್ಯ ಅವರ ಟ್ವೀಟ್ ಗೆ ಅನ್ನಪೂರ್ಣ ಹೊಟೇಲ್  ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪ್ರತಿಕ್ರಿಯಿಸಿ,   ಆತ್ಮೀಯ ತೇಜಸ್ವಿ ಸೂರ್ಯ ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ವಾಸ್ತವವಾಗಿ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮನ್ನು ಉಚಿತವಾಗಿ ನೀಡುವಂತೆ ಒತ್ತಾಯಿಸಲಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಅಷ್ಟೇ… ಎಂದು ಬರೆದುಕೊಂಡಿದೆ.

ಈ ಟ್ವೀಟ್ ಬೆನ್ನಲ್ಲೇ ತೇಜಸ್ವಿ ಸೂರ್ಯಗೆ ಭಾರೀ ಮುಖಭಂಗವಾಗಿದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತೇಜಸ್ವಿ ಸೂರ್ಯರನ್ನು ಟ್ರೋಲ್ ಮಾಡಿದ್ದಾರೆ. ಇದು ತಮಿಳುನಾಡು. ನೀವು ಇತರ ರಾಜ್ಯಗಳಲ್ಲಿ ಆಟವಾಡಿದಂತೆ ಇಲ್ಲಿ ಆಟವಾಡಬೇಡಿ ಎಂದು  ಹೇಳಿದ್ದಾರೆ.




ಇನ್ನೂ ಲಕ್ಷ್ಮೀ ರಾಮಚಂದ್ರನ್ ಎಂಬವರು ಈ ಬಗ್ಗೆ ಟ್ವೀಟ್ ಮಾಡಿ ತೇಜಸ್ವಿ ಸೂರ್ಯರನ್ನು ಬೆಂಡೆತ್ತಿದ್ದು, “ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು. ನಿಮ್ಮ ನಾಟಕಗಳನ್ನು ಬೆಂಗಳೂರಿನಲ್ಲಿಯೇ ಬಿಟ್ಟು ಬನ್ನಿ ಎಂದು ವ್ಯಂಗ್ಯವಾಡಿದ್ದಾರೆ.

ಹೊಟೇಲ್ ನೀಡಿದ ಪ್ರತಿಕ್ರಿಯೆ

ಇತ್ತೀಚಿನ ಸುದ್ದಿ