ಪ್ರವೀಣ್ ಹತ್ಯೆ ಪ್ರಕರಣ: ತಮ್ಮದೇ ಸರ್ಕಾರದ ವಿರುದ್ಧ ಸದಾನಂದ ಗೌಡ ಆಕ್ರೋಶ
ಮಂಗಳೂರು: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಇದ್ದು ಕೂಡ, ಪ್ರವೀಣ್ ಹತ್ಯೆ ಖಂಡನೀಯವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಂಗಳೂರಿನಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾಕೆ ದಿಟ್ಟ ಹೆಜ್ಜೆ ಇಡಲು ಹಿಂದೇಟು ಹಾಕುತ್ತಿದೆ ಅನ್ನೋ ಪ್ರಶ್ನೆ ಕಾರ್ಯಕರ್ತರಲ್ಲಿ ಇದೆ. ಸರ್ಕಾರ ದಿಟ್ಟ ಹೆಜ್ಜೆಯನ್ನು ಈಗಾಗಲೇ ಇಡಬೇಕಿತ್ತು ಎಂದು ಸದಾನಂದ ಗೌಡ ಹೇಳಿದರು.
ಹರ್ಷ ಕೊಲೆ ಹಾಗೂ ಹಿಂದೆ ನಡೆದ ಕೊಲೆ ಸಂದರ್ಭದಲ್ಲಿ ದಿಟ್ಟ ಹೆಜ್ಜೆ ತಗೋಬೇಕಿತ್ತು. ಅದರಲ್ಲಿ ರಾಜ್ಯ ಸರ್ಕಾರ ಎಡವಿದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಪೊಲೀಸ್ ಇಲಾಖೆ ದುರ್ಬಲವಾಗುತ್ತಿದೆ. ಯಾರು ಹೆದರದ ವಾತಾವರಣ ಸೃಷ್ಟಿಯಾಗಿರೋದು ದುರ್ದೈವ ಎಂದರು.
ಪ್ರವೀಣ್ ಪತ್ನಿ ಎರಡು ತಿಂಗಳಿಂದ ಬೆದರಿಕೆ ಬರ್ತಾ ಇತ್ತು ಅಂತಾ ಹೇಳಿದ್ದಾರೆ. ಅದನ್ನು ಪೊಲೀಸರಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಹೀಗೆನಾದರೂ ಆಗಿದ್ದರೇ ಅದು ನಿಜಕ್ಕೂ ಖಂಡನೀಯವಾದದ್ದು. ಶೀಘ್ರವಾಗಿ ಆರೋಪಿಗಳ ಪತ್ತೆಯಾಗಬೇಕು ಎಂದರು.
ಮಸೂದ್ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿಲ್ಲ ಅನ್ನೋ ವಿಚಾರವಾಗಿ ಮಾತನಾಡಿದ ಅವರು ಯಾರೆ ಇದ್ದರೂ ಅವರ ಮನೆಗೆ ಹೋಗಬೇಕು. ಜವಾಬ್ದಾರಿ ಇದ್ದವರು ಆ ಕೆಲಸ ಮಾಡಬೇಕು ಎಂದು ಚಾಟಿ ಬೀಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka