ತಂಪು ಪಾನೀಯದ ಮುಚ್ಚಳ ಗಂಟಲಲ್ಲಿ ಸಿಕ್ಕಿಕೊಂಡು ಪಿಯುಸಿ ವಿದ್ಯಾರ್ಥಿ ಸಾವು
ಹರ್ಯಾಣ: ತಂಪು ಪಾನೀಯದ ಬಾಟಲಿಯ ಮುಚ್ಚಳವನ್ನು ಬಾಯಿಂದ ತೆಗೆಯಲು ಯತ್ನಿಸಿದಾಗ ಮುಚ್ಚಲ ಗಂಟಲಿನಲ್ಲಿ ಸಿಲುಕಿ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹರ್ಯಾಣ ಅಂಬಾಲಾದಲ್ಲಿ ನಡೆದಿದೆ.
15 ವರ್ಷದ ಯಶ್ ಮೃತ ದುರ್ದೈವಿ. ತಂಪು ಪಾನೀಯದ ಬಾಟಲಿಯನ್ನು ತಂಗಿ ತೆರೆಯದ ಹಿನ್ನೆಲೆಯಲ್ಲಿ ಯಶ್ ಬಾಯಿಯಿಂದ ತೆಗೆಯಲು ಯತ್ನಿಸಿದ್ದು, ಈ ವೇಳೆ ಏಕಾಏಕಿ ರಭಸವಾಗಿ ಗಂಟಲಿಗೆ ಹೋದ ಬಾಟಲಿ ಮುಚ್ಚಳ ಗಂಟಲಲ್ಲಿ ಸಿಲುಕೊಂಡಿದೆ.
ಈ ವೇಳೆ ಮನೆಯವರು ಮುಚ್ಚಳ ತಗೆಯಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ, ಕೊನೆಯೂ ಯಶ್ ನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬೈಕ್ ಗೆ ಕಾರು ಡಿಕ್ಕಿ: ಪ್ಲೈಓವರ್ ನಿಂದ ಕೆಳಗೆ ಬಿದ್ದು ಸವಾರ ಸಾವು
ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಯುವತಿ ಆತ್ಮಹತ್ಯೆಗೆ ಶರಣು!
ಏಕಲವ್ಯಪ್ರಶಸ್ತಿ ಪುರಸ್ಕೃತ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ಇನ್ನಿಲ್ಲ
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿ