ತನ್ನದೇ ಪಕ್ಷದ ನಾಯಕರನ್ನ ಸೋಲಿಸಿ ಅನ್ಯಾಯ ಮಾಡಿದ್ದು ಮೋದಿ ಅಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು: ತನ್ನದೇ ಪಕ್ಷದ ನಾಯಕರನ್ನ ಸೋಲಿಸಿ ಅನ್ಯಾಯ ಮಾಡಿದ್ದು ಮೋದಿ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಮೋದಿ ನ್ಯಾಯ ಕೊಡಿ ಎಂಬ ಸಿದ್ದರಾಮಯ್ಯ ಸರಣಿ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ತನ್ನದೇ ಪಕ್ಷದ ನಾಯಕರನ್ನ ಸೋಲಿಸಿ ಅನ್ಯಾಯ ಮಾಡಿದ್ದು ಮೋದಿ ಅಲ್ಲ, ನನ್ನನ್ನ ಸೋಲಿಸಿದವರನ್ನ ಸೋಲಿಸಿ ನ್ಯಾಯ ಕೊಡಿ ಎಂದು ಪರಮೇಶ್ವರ್ ಕೇಳಬೇಕು ಎಂದರು.
ನ್ಯಾಯ ಕೇಳಬೇಕಿರೋದು ಪರಮೇಶ್ವರ್–ಖರ್ಗೆಯವರು, ಸಿದ್ದರಾಮಯ್ಯ ಅಲ್ಲ, ಸಿದ್ದರಾಮಯ್ಯ ಯಾವ ರೀತಿ ನ್ಯಾಯ ಬಯಸುತ್ತಿದ್ದಾರೆ ನನಗೆ ಗೊತ್ತಾಗ್ತಿಲ್ಲ ಎಂದು ಅವರು ಹೇಳಿದರು.
ಅಧಿಕಾರ ಇದ್ರೆ ಇರ್ತೀನಿ, ಇಲ್ಲ ಬೇರೆ ಪಕ್ಷಕ್ಕೆ ಹೋಗ್ತೀನಿ ಅನ್ನೋರು ಮೋದಿ ಅಲ್ಲ, ಎಸ್.ಡಿ.ಪಿ.ಐ-ಪಿಎಫ್ ಐ ಕೇಸ್ ಹಿಂಪಡೆದು ಸರಣಿ ಕೊಲೆಗೆ ಕಾರಣವಾಗಿದ್ದು ನೀವು, ಅದಕ್ಕೆ ಜನ ನ್ಯಾಯ ಕೊಟ್ಟಿದ್ದು , ರಿಡ್ಯೂ ಹೆಸರಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಕ್ಕೆ ಜನ ನ್ಯಾಯ ಕೊಟ್ಟಿದ್ದು, ಸಮಾಜವಾದಿ ಹೆಸರಲ್ಲಿ ಮಜಾವಾದಿ ರಾಜಕಾರಣ ಮಾಡಿದ್ದಕ್ಕೆ ಜನ ನ್ಯಾಯ ಕೊಟ್ಟಿದ್ದು ಎಂದು ಸಿ.ಟಿ.ರವಿ ಚುಚ್ಚಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw