ತಂದೆ ಹಾಗೂ ತಂದೆಯ ಪ್ರೇಯಸಿಯನ್ನು ಕೊಚ್ಚಿಕೊಂದ ಮಗ!
ಮೈಸೂರು: ತಂದೆ ಹಾಗೂ ತಂದೆಯ ಪ್ರೇಯಸಿಯನ್ನು ಪುತ್ರನೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ಹೊರವಲಯದಲ್ಲಿ ನಡೆದಿದ್ದು, ಮಚ್ಚಿನಿಂದ ಕೊಚ್ಚಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕೆ.ಜಿ.ಕೊಪ್ಪಲು ನಿವಾಸಿ 56 ವರ್ಷ ವಯಸ್ಸಿನ ಶಿವಪ್ರಕಾಶ್ ಹಾಗೂ ಶ್ರೀನಗರ ನಿವಾಸಿ 48 ವರ್ಷ ವಯಸ್ಸಿನ ಲತಾ ಹತ್ಯೆಗೀಡಾದವರಾಗಿದ್ದು, ಹತ್ಯೆಯ ಬಳಿಕ ಶಿವಪ್ರಕಾಶ್ ಪುತ್ರ ಸಾಗರ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಲತಾ ಮನೆಗೆ ನುಗ್ಗಿದ ಸಾಗರ್, ಮೊದಲು ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಆ ಬಳಿಕ ಲತಾ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಪರಿಣಾಮವಾಗಿ ಅವರಿಬ್ಬರೂ ಸಾವಿಗೀಡಾಗಿದ್ದಾರೆ. ಲತಾ ಮೇಲೆ ಹಲ್ಲೆ ನಡೆಸುತ್ತಿರುವ ವೇಳೆ ಆಕೆಯ ಪುತ್ರ ನಾಗರ್ಜುನ್ ತಡೆಯಲು ಮುಂದಾಗಿದ್ದು, ಈ ವೇಳೆ ಆತನ ಮೇಲೆ ಕೂಡ ಸಾಗರ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ನಾಗರ್ಜುನ್ ಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಕ್ಷಿಣ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಐವಾನ್ ಡಿಸೋಜಾ ಮನೆಯಿಂದಲೇ ಮತಾಂತರ ಆರಂಭವಾಗಿದೆ | ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ
ಜಾನುವಾರುಗಳಿಗೆ ಆಸರೆಯಾಗಿದ್ದ ಸಬ್ ಇನ್ ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನ
ವಿದ್ಯಾರ್ಥಿಯ ಜೊತೆಗಿನ ಒಡನಾಟದಿಂದ ಪ್ರಾಣ ಕಳೆದುಕೊಂಡ ಗೃಹಿಣಿ!
ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರದ್ದೇ ದೊಡ್ಡಪಾಲು | ಪ್ರಿಯಾಂಕ್ ಖರ್ಗೆ
ನಿರ್ಲಜ್ಜ, ನೀಚ ರಾಜಕಾರಣಿಗಳ ಬದಲು ಹಿಂದೂ ಸಂಘಟನೆಗಳಿಗೆ ಬಲ ತುಂಬಿ: ಬಿಜೆಪಿ ವಿರುದ್ಧ ಮುತಾಲಿಕ್ ಪರೋಕ್ಷ ಕಿಡಿ