ದೇವಸ್ಥಾನಕ್ಕೆ ಬಂದಿದ್ದ ತಂದೆ, ತಾಯಿ, ಮಗಳು ನದಿಯಲ್ಲಿ ಕೊಚ್ಚಿ ಹೋಗಿ ಸಾವು!
ಬಾಗಲಕೋಟೆ: ದೇವರ ದರ್ಶನಕ್ಕೆಂದು ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಬಳಿಗೆ ಆಗಮಿಸಿದ್ದ ಒಂದೇ ಕುಟುಂಬದ ಮೂವರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದ್ದು, ಊಟ ಮಾಡಿ ನದಿಯಲ್ಲಿ ಕೈ ತೊಳೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
40 ವರ್ಷ ವಯಸ್ಸಿನ ವಿಶ್ವನಾಥ್ ಮಾವಿನ ಮರದ ಹಾಗೂ ಅವರ ಪತ್ನಿ ಶ್ರೀದೇವಿ ಮಾವಿನಮರದ ಮತ್ತು 12 ವರ್ಷ ವಯಸ್ಸಿನ ಪುತ್ರಿ ನಂದಿನಿ ಮೃತಪಟ್ಟವರಾಗಿದ್ದಾರೆ. ಇವರು ಮೂಲತಃ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ರೋಣದಲ್ಲಿ ವಾಸವಾಗಿದ್ದರು.
ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು. ನಂತರ ಶಿವಯೋಗ ಮಂದಿರಕ್ಕೆ ತೆರಳಿದ್ದರು. ಬಳಿಕ ಉಪಹಾರ ಸೇವಿಸಲು ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಊಟ ಮಾಡಿ ನಂದಿನಿ ಕೈತೊಳೆಯಲು ಹೋಗಿ ನೀರಿಗೆ ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ವಿಶ್ವನಾಥ್ ಹಾಗೂ ಶ್ರೀದೇವಿ ನೀರಿಗೆ ಇಳಿದಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಸ್ಥಳೀಯ ಈಜುಗಾರರು ಅಗ್ನಿಶಾಮಕ ಸಿಬ್ಬಂದಿಯಿಂಧ ಹುಟುಕಾಟ ನಡೆಸಿ ಶ್ರೀದೇವಿ ಅವರ ಶವವನ್ನು ಹೊರ ತೆಗೆಯಲಾಗಿದೆ. ವಿಶ್ವನಾಥ್ ಹಾಗೂ ಮಗಳು ನಂದಿನಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಳು….
ಅಪ್ರಾಪ್ತ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಮಹಿಳೆ | ಮಹಿಳೆಯ ವಿಲಕ್ಷಣ ಮನಸ್ಥಿತಿಗೆ ಬೆಚ್ಚಿಬಿದ್ದ ಪೋಷಕರು
ರಮೇಶ್ ಜಾರಕಿಹೊಳಿ ಅವರ ರಕ್ಷಾ ಬಂಧನ ಆಚರಣೆ ಹೇಗಿತ್ತು ಗೊತ್ತಾ?
ನಾಳೆಯಿಂದ ಶಾಲಾ ಕಾಲೇಜು ಆರಂಭ | ಕೊವಿಡ್ ಗೆ ಸೆಡ್ಡು ಹೊಡೆಯಲು ಸರ್ಕಾರದ ನಡೆಸಿರುವ ಸಿದ್ಧತೆ ಹೇಗಿದೆ ಗೊತ್ತಾ?
ಆಗಸ್ಟ್ 23ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ- ಪರ್ಯಾಯ ರಾಜಕಾರಣದ ಕುರಿತು ಒಂದು ಸಂವಾದ ಕಾರ್ಯಕ್ರಮ
ಕೊವಿಡ್ ಮಾರ್ಗಸೂಚಿಗೆ ಅಂಜದೇ ಗಣೇಶೋತ್ಸವ ನಡೆಸಲು ಶಾಸಕ ಯತ್ನಾಳ್ ಕರೆ!
ಜಾತಿಯ ಆಧಾರದ ಮೇಲೆ ನೀಡುವ ಮೀಸಲಾತಿ ನಿಲ್ಲಿಸಬೇಕು | ಮುಖ್ಯಮಂತ್ರಿ ಚಂದ್ರು ಹೇಳಿಕೆ
ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್