ತಂದೆಯ ನಿಧನದ ನೋವಿನಲ್ಲಿಯೇ ಪರೀಕ್ಷೆ ಬರೆಯಲಿರುವ ಪುನೀತ್ ಪುತ್ರಿ ವಂದಿತಾ - Mahanayaka
5:29 AM Wednesday 5 - February 2025

ತಂದೆಯ ನಿಧನದ ನೋವಿನಲ್ಲಿಯೇ ಪರೀಕ್ಷೆ ಬರೆಯಲಿರುವ ಪುನೀತ್ ಪುತ್ರಿ ವಂದಿತಾ

puneeth rajkumar
08/11/2021

ಬೆಂಗಳೂರು: ಅಭಿಮಾನಿ ದೇವ್ರುಗಳ ಮೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಇಂದಿನ 11 ದಿನಗಳಾಗಿವೆ. ಇಂದು ಪುನೀತ್ ಕುಟುಂಬಸ್ಥರು 11ನೇ ದಿನದ ಕಾರ್ಯ ನಡೆಸಿದ್ದಾರೆ. ಈ ನಡುವೆಯೇ ಅಪ್ಪು ಅವರ ಪ್ರೀತಿಯ ಪುತ್ರಿ ವಂದಿತಾ ತಂದೆಯ ನಿಧನದ ನೋವಿನ ನಡುವೆಯೇ ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಸೋಫಿಯಾ ಶಾಲೆಯಲ್ಲಿ ICSE 10ನೇ ತರಗತಿಯಲ್ಲಿ ಓದುತ್ತಿರುವ ವಂದಿತಾಳಿಗೆ ಮುಂದಿನ ವಾರ  ಸೆಮಿಸ್ಟರ್ ಎಕ್ಸಾಂ ಆರಂಭವಾಗಲಿದೆ. ಈ ನಡುವೆ ಪೂರ್ವ ತಯಾರಿ ಎಕ್ಸಾಂ ಆರಂಭವಾಗಿದೆ. ಹೀಗಾಗಿ ತಂದೆಯ 11ನೇ ದಿನದ ಕಾರ್ಯದ ನಡುವೆಯೇ ವಂದಿತಾ ಪರೀಕ್ಷೆ ಬರೆಯಲಿದ್ದಾರೆ.

ಇನ್ನೂ ಬೆಳಗ್ಗೆ ಸಾಧ್ಯವಾದಷ್ಟು ಬೇಗವೇ ಪೂಜಾ ಕಾರ್ಯಗಳನ್ನು ಮುಗಿಸಲು ಪುನೀತ್ ರಾಜ್ ಕುಮಾರ್ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಪುನೀತ್ ನಿಧನರಾದ ಬಳಿಕ ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಕಂಠೀರವ ಕ್ರೀಡಾಂಗಣದಲ್ಲಿರುವ ಪುನೀತ್ ಸಮಾಧಿ ಬಳಿಗೆ ಬರುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ