ತಂದೆಯ ಚಟ ಬಿಡಿಸಿದ ಮಗಳ ‘ಹಠ’: ಅದ್ದೂರಿ ಮೆರವಣಿಗೆ ಮಾಡಿ ಮಗಳಿಗೆ ಮೊಬೈಲ್ ಕೊಡಿಸಿದ ಬಡ ತಂದೆ
ಮಧ್ಯಪ್ರದೇಶ: ಮಗಳಿಗಾಗಿ ತನ್ನ ಮದ್ಯಪಾನದ ಚಟವನ್ನು ಬಿಟ್ಟ ತಂದೆಯೊಬ್ಬ, ತನ್ನ ಮಗಳಿಗಾಗಿ ಮೊಬೈಲ್ ಖರೀದಿಸಿದ್ದು, ಈ ಸಂಭ್ರಮಕ್ಕಾಗಿ ಮೆರವಣಿಗೆ ನಡೆಸಿ, ಊರಿಡಿ ಸಂಭ್ರಮಿಸಿದ್ದಾರೆ.
ಮಧ್ಯಪ್ರದೇಶದ ಶಿವಪುರಿಯ ಚಹಾ ಮಾರಾಟಗಾರ ಮುರಾರಿಲಾಲ್ ಕುಶ್ವಾಹ ಈ ಮಾದರಿ ತಂದೆಯಾಗಿದ್ದು, ತನ್ನ ಮಗಳಿಗೆ 12 ಸಾವಿರದ 500 ರೂಪಾಯಿಯ ಮೊಬೈಲ್ ತೆಗೆಸಿಕೊಟ್ಟು ಸುಮಾರು 15 ಸಾವಿರ ಖರ್ಚು ಮಾಡಿ ಮೊಬೈಲ್ ನ್ನು ಮನೆಗೆ ತರಲು ವ್ಯಾಗನ್ ಮತ್ತು ಡಿಜೆ ಬಾಡಿಗೆಗೆ ಪಡೆದು, ಮಗಳಿಗೆ ಅದ್ದೂರಿಯಾಗಿ ಉಡುಗೊರೆ ನೀಡಿದ್ದಾರೆ.
ಹಳೆ ಶಿವಪುರಿಯ ಗುರುದ್ವಾರದ ಬಳಿ ವಾಸಿಸುತ್ತಿರುವ ಮುರಾರಿಲ್ಲಾ ಚಹಾ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅವರ 8 ವರ್ಷ ವಯಸ್ಸಿನ ಮಗಳು ಪ್ರಿಯಾಂಕಾಗೆ ಮೊಬೈಲ್ ಬೇಕು ಎನ್ನುವ ಆಸೆ ಇತ್ತು. ತನ್ನ ತಂದೆ ಮುರಾರಿಲ್ಲಾ ಬಳಿಯಲ್ಲಿ ಇದನ್ನು ಹೇಳಿದಾಗ ಹಣವಿಲ್ಲ ಎಂದು ಹೇಳಿದ್ದರು. ಈ ವೇಳೆ ಮಗಳು, ಕುಡಿಯುವುದನ್ನು ಕಡಿಮೆ ಮಾಡಿ, ನನಗೆ ಮೊಬೈಲ್ ತೆಗೆಸಿಕೊಡಬೇಕು ಎಂದು ವಾರ್ನಿಂಗ್ ನೀಡಿದ್ದಾಳೆ.
ಮದ್ಯದ ಮೇಲೆ ಆಸೆ, ಮಗಳ ಮೇಲೆ ಪ್ರೀತಿ, ಏನು ಮಾಡೋಣ ಎಂದು ಯೋಚಿಸಿದ ಮುರಾರಿಲ್ಲಾ, ತನಗೆ ಮಗಳ ಪ್ರೀತಿಯೇ ಮುಖ್ಯ ಎಂದು ಮದ್ಯಪಾನವನ್ನು ತೊರೆದು, ಮಗಳಿಗೆ ಮೊಬೈಲ್ ತೆಗೆಸಲು ಹಣ ಸಂಗ್ರಹಿಸಲು ಶುರು ಮಾಡಿದ್ದಾರೆ. ಕೊನೆಗೂ ಮೊಬೈಲ್ ತೆಗೆಸಲು ಹಣ ಹೊಂದಿಸಿದರು. ಇದೀಗ ಅದ್ದೂರಿ ಮೆರವಣಿಗೆ ಮಾಡಿ ಮಗಳಿಗೆ ಗಿಫ್ಟ್ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ಮಾದರಿಯಲ್ಲಿ ಭಾರತದಲ್ಲಿಯೂ ತಬ್ಲಿಘಿ ಜಮಾತ್‌ನ್ನು ನಿಷೇಧಿಸಿ: ತೊಗಾಡಿಯಾ
ಬೆಂಗಳೂರು: ಧ್ವನಿವರ್ಧಕಗಳ ತೆರವಿಗೆ ಮುಂದಾದ ಪೊಲೀಸ್ ಇಲಾಖೆ
ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಗೆ ಅಮೇರಿಕಾ ಕಾರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪ
ಬೆಂಗಳೂರು: ಒಪ್ಪೋ ಕೇಂದ್ರ ಕಚೇರಿಯ ಮೇಲೆ ಐಟಿ ದಾಳಿ
ಅಗತ್ಯ ಬಿದ್ದರೆ ನೈಟ್ ಕರ್ಫ್ಯೂ: ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ
ನಿಮ್ಮ ಅಪ್ಪನ ಕಾಲದಲ್ಲಿ ಅತೀ ದೊಡ್ಡ ಗುಂಪು ಹತ್ಯೆ ನಡೆದಿತ್ತು: ರಾಹುಲ್ ಗಾಂಧಿಗೆ ಬಿಜೆಪಿ ನಾಯಕರ ತಿರುಗೇಟು
ಓಮಿಕ್ರಾನ್ ಪ್ರಕರಣ: ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗುತ್ತಾ? | ತಜ್ಞರು ನೀಡಿದ ಸಲಹೆ ಏನು?