ತರಕಾರಿ ಮಾರುಕಟ್ಟೆಯಲ್ಲಿ ತಂದೆಯ ಕ್ರಿಯಾಕರ್ಮ ನೆರವೇರಿಸಿದ ಪುತ್ರಿಯರು!
20/04/2021
ಛತ್ತೀಸ್ ಗಢ: ಕೊರೊನಾ ಬಹಳಷ್ಟು ಜನರನ್ನು ತಬ್ಬಲಿ ಮಾಡುತ್ತಿದೆ. ಇಬ್ಬರು ಪುತ್ರಿಯರು ಕೊರೊನಾದಿಂದ ಸಾವಿಗೀಡಾದ ತಮ್ಮ ತಂದೆಯ ಕ್ರಿಯಾ ಕರ್ಮಗಳನ್ನು ತಾವೇ ನೆರೆವೇರಿಸಿದ್ದಾರೆ. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಸಹೋದರಿಯರು ತಮ್ಮ ತಂದೆಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಏಪ್ರಿಲ್ 9 ರಂದು ಈ ಪುತ್ರಿಯರ ತಂದೆ ನಿಧನರಾಗಿದ್ದರು. ಇದಾದ ಬಳಿಕ ಮೃತರ 14 ಹಾಗೂ 19 ವರ್ಷದ ಪುತ್ರಿಯರು ನವಾಪರದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಪಿಂಡ ಪ್ರಧಾನ ಕಾರ್ಯ ನೆರವೇರಿಸಿದ್ದಾರೆ.
ಈ ಕುಟುಂಬದಲ್ಲಿ ಗಂಡು ಮಕ್ಕಳಿರಲಿಲ್ಲ. ಹೀಗಾಗಿ ಹೆಣ್ಣು ಮಕ್ಕಳೇ ತಂದೆಗೆ ಪಿಂಡ ಪ್ರಧಾನ ಮಾಡಿದ್ದಾರೆ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಯಾವುದೇ ಕಾರ್ಯಗಳನ್ನು ಮಾಡುವಂತಿರಲಿಲ್ಲ. ಆದರೆ ಅಂಬೇಡ್ಕರ್ ಅವರ ಸಮಾನತೆಯ ಸಾಮಾಜಿಕ ಬದಲಾವಣೆ ಇದೀಗ ದೇಶಾದ್ಯಂತ ಎದ್ದು ನಿಂತಿದೆ.