ತಂದೆ ಮಲಗಿದ್ದ ವೇಳೆ ತಲೆಗೆ ರುಬ್ಬುವ ಕಲ್ಲು ಎತ್ತಿ ಹಾಕಿದ ಪಾಪಿ ಪುತ್ರ!

kolara news
18/06/2021

ಕೋಲಾರ: ಮಲಗಿದ್ದ ತಂದೆಯ ತಲೆಯನ್ನು ಸ್ವಂತ ಮಗ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ನಡೆದಿದೆ.

ಅಂಬೇಡ್ಕರ್ ಪಾಳ್ಯ ನಿವಾಸಿ, 65 ವರ್ಷ ವಯಸ್ಸಿನ ವೆಂಕಟೇಶ್ ತನ್ನ ಪುತ್ರನಿಂದಲೇ ಹತ್ಯೆಗೀಡಾದವರಾಗಿದ್ದಾರೆ. ಘಟನೆಯ ಬಳಿಕ ಆರೋಪಿ ಪುತ್ರ ನವೀನ್ ಪ್ರಕಾಶ್ ನನ್ನು ಇಲ್ಲಿನ ನಿವಾಸಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಗನ ಕೌಟುಂಬಿಕ ಸಮಸ್ಯೆಯನ್ನು ಬಗೆ ಹರಿಸಲು  ತಂದೆ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ  ಗುರುವಾರ ರಾತ್ರಿ ತಂದೆ ಮಗನ ನಡುವೆಯೇ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.

ತಂದೆ ತನ್ನ ಜೀವನವನ್ನು ಸರಿ ಮಾಡಲು ಬಂದಿದ್ದಾರೆ ಎಂದೂ ಸುಮ್ಮನಿರದ ಪುತ್ರ, ತಂದೆ ತನ್ನ ಜೊತೆಗೆ ಜಗಳ ಮಾಡಿದ್ದನ್ನೇ ದೊಡ್ಡ ವಿಷಯವಾಗಿ ತೆಗೆದುಕೊಂಡಿದ್ದಾನೆ. ರಾತ್ರಿ ತಂದೆ ಮಲಗಿದ್ದ ವೇಳೆಯಲ್ಲಿ ರುಬ್ಬುವ ಕಲ್ಲನ್ನು ತಂದೆಯ ತಲೆಗೆ ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಘಟನೆಯ ಬಳಿಕ ಪುತ್ರನನ್ನು ಸ್ಥಳೀಯರು ಶ್ರೀನಿವಾಸಪುರ ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಹೋಗುತ್ತಿರುವಾಗಲೇ ಇರಿದು ಕೊಂದ ತಂದೆ

ಇತ್ತೀಚಿನ ಸುದ್ದಿ

Exit mobile version