ತಂದೆಯನ್ನು ಕೊಂದು, ಕುಡಿದು ಬಿದ್ದು ಸತ್ತ ಎಂದು ನಂಬಿಸಿದ ಪುತ್ರ | ಪುತ್ರನ ಹೈಡ್ರಾಮ ಬಯಲಾಗಿದ್ದು ಹೇಗೆ ಗೊತ್ತಾ?
ಶಿವಮೊಗ್ಗ: ತಂದೆಯನ್ನೇ ಹೊಡೆದು ಕೊಂದ ಮಗ, ಅಪ್ಪ ಕುಡಿದು ಬಿದ್ದು ಸತ್ತಿದ್ದಾನೆ ಎಂದು ಊರವರನ್ನು ನಂಬಿಸಿದ್ದು, ಆದರೆ ಅಂತ್ಯಸಂಸ್ಕಾರ ವೇಳೆ ಸಿಕ್ಕಿಬಿದ್ದಿದ್ದು, ಕೊನೆಗೂ ಪುತ್ರನ ಹೈಡ್ರಾಮಾ ಬಯಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ತಾಲೂಕಿನ ಮಂಡೇನಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದ ಕುಮಾರ್ ನಾಯ್ಕ್ ತೀವ್ರ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ಕುಡಿತದ ನಶೆಯಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪುತ್ರ ಎಲ್ಲರನ್ನು ನಂಬಿಸಿದ್ದ. ಆದರೆ, ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಬೇಕು ಅನ್ನುವಷ್ಟರಲ್ಲಿ ಪುತ್ರನ ಮುಖವಾಡ ಕಳಚಿ ಬಿದ್ದಿದೆ.
ಭಾನುವಾರ ರಾತ್ರಿ ಕುಮಾರ್ ನಾಯ್ಕ್ ಹಾಗೂ ಪುತ್ರ ಮಧುನಾಯ್ಕ್ ಎಂಬವರ ನಡುವೆ ಜಗಳವಾಗಿದ್ದು, ಈ ವೇಳೆ ಪುತ್ರ ಮಧುನಾಯ್ಕ್ ದೊಣ್ಣೆಯಿಂದ ತನ್ನ ತಂದೆಯನ್ನು ಹೊಡೆದಿದ್ದ. ಪುತ್ರನ ಹೊಡೆತದಿಂದಾಗಿ ಕುಮಾರ್ ನಾಯ್ಕ್ ನ ಕಿವಿಯಲ್ಲಿ ರಕ್ತ ಬಂದಿತ್ತು ಎನ್ನಲಾಗಿದೆ. ಮನೆಯೊಳಗೆ ನಿಂತರೆ ಪುತ್ರ ಮತ್ತೆ ಹಲ್ಲೆ ಮಾಡಬಹುದು ಎಂದು ಹೆದರಿದ ತಂದೆ ರಾತ್ರಿ ಮನೆಯಿಂದ ಹೊರಗೆ ಬಂದು ಮಲಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ತಂದೆ ತನ್ನ ಏಟಿನಿಂದಲೇ ಸಾವನ್ನಪ್ಪಿದ್ದಾನೆ ಎನ್ನುವುದು ತಿಳಿದಿದ್ದರೂ ಮಧುನಾಯ್ಕ್, ತಂದೆ ಕುಡಿದ ಮತ್ತಿನಲ್ಲಿ ಬಿದ್ದು ಸತ್ತಿದ್ದಾನೆ ಎಂದು ಎಲ್ಲರನ್ನೂ ನಂಬಿಸಿದ್ದಾನೆ. ಬಳಿಕ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾನೆ. ಈ ವೇಳೆ ಕುಮಾರ್ ನಾಯ್ಕ್ ಅವರ ಪುತ್ರಿಗೆ ಅಸಲಿ ವಿಚಾರ ಗೊತ್ತಾಗಿದೆ. ಆಕೆ ತಕ್ಷಣವೇ ತುಂಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇತ್ತ ತಂದೆಯನ್ನು ಕೊಂದು ಅಂತ್ಯಸಂಸ್ಕಾರಕ್ಕೆ ಸಿದ್ಧನಾಗುತ್ತಿದ್ದ ಮಧುನಾಯ್ಕ್ ಗೆ ಕೊನೆಯ ಕ್ಷಣದಲ್ಲಿ ಪೊಲೀಸರು ಶಾಕ್ ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದರೂ, ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ | ಯಡಿಯೂರಪ್ಪ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ಕೊನೆಗೂ ಗ್ರೀನ್ ಸಿಗ್ನಲ್
ಶಾಕಿಂಗ್ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ಯುವತಿಯ ಖಾಸಗಿ ಅಂಗ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ!
ದೇವಸ್ಥಾನ ತೆರವಿನಿಂದ ಕೋಟ್ಯಂತರ ಜನರ ಮನಸ್ಸಿಗೆ ನೋವಾಗಿದೆ: ಸಿ.ಟಿ.ರವಿ
ಹೈದರಾಬಾದ್: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ | ಸಿಡಿದೆದ್ದ ಜನರು