7 ವರ್ಷಗಳಿಂದ ತಂದೆಯಿಂದಲೇ ಮಗಳ ಅತ್ಯಾಚಾರ | ತಂದೆಯ ವಿರುದ್ಧ ಠಾಣೆ ಮೆಟ್ಟಿಲೇರಿದ 17 ವರ್ಷದ ಬಾಲಕಿ
ಚಂಡೀಗಢ: ರಕ್ಷಕನಾಗಬೇಕಾಗಿದ್ದ ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ 7 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದ್ದು, ತನ್ನ ತಂದೆಯ ಕೃತ್ಯ ಸಹಿಸಲಾಗದೇ ಇದೀಗ 17 ವರ್ಷದ ಬಾಲಕಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನನ್ನ ತಂದೆ 7 ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ. ನಾನು ಹಲವು ಬಾರಿ ಗರ್ಭಾವತಿಯಾಗಿದ್ದು, ಆ ಸಂದರ್ಭದಲ್ಲಿ ತಂದೆ ಬಲವಂತವಾಗಿ ನನ್ನನ್ನು ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸುತ್ತಿದ್ದ ಎಂದು ಬಾಲಕಿ ಹಿಸಾರ್ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿದ್ದಾಳೆ.
ತಂದೆ ಹೇಳಿದಂತೆ ಕೇಳದಿದ್ದರೆ, ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದ. ಇದೀಗ ನನ್ನ 11 ವರ್ಷದ ತಂಗಿಗೂ ಆತ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣ ಸಂಬಂಧ ಆರೋಪಿ ತಂದೆಯ ವಿರುದ್ಧ ನಿರಂತರ ಅತ್ಯಾಚಾರ, ಒಪ್ಪಿಗೆ ಇಲ್ಲದ ಗರ್ಭಪಾತ, ಬೆದರಿಕೆ ಸೇರಿದಂತೆ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ