ತಂದೆಯಿಂದಲೇ ಮಗನ ಮೇಲೆ ಗುಂಡೇಟು: ಬಾಲಕನ ಮೆದುಳು ನಿಷ್ಕ್ರಿಯ | ಅಂಗಾಂಗ ದಾನಕ್ಕೆ ಸಿದ್ಧತೆ
ಮಂಗಳೂರು: ಕಾರ್ಮಿಕರ ಮೇಲೆ ಉದ್ಯಮಿ ಹಾರಿಸಿದ ಗುಂಡು ಆತನ ಪುತ್ರನಿಗೆ ತಗಲಿದ ಘಟನೆ ನಿನ್ನೆ ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿಯಲ್ಲಿ ನಡೆದಿತ್ತು. ಇದೀಗ ಗಾಯಾಳು ಬಾಲಕನ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿದು ಬಂದಿದ್ದು, ಬಾಲಕನ ಅಂಗಾಂಗ ದಾನಕ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ವರದಿಯಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜೇಶ್ ಪ್ರಭು ಪತ್ನಿ ಹಾಗೂ ಚಾಲಕ, ಕ್ಲೀನರ್ ನಡುವೆ ಮಂಗಳವಾರ ಸಂಜೆ ವಾಗ್ವಾದ ನಡೆದಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ತಂದೆ ಹಾಗೂ ಮಗ ಸುಧೀಂದ್ರ ಕೂಡ ಜಗಳಕ್ಕೆ ಇಳಿದಿದ್ದಾರೆ. ಈ ನಡುವೆ ಸುಧೀಂದ್ರ ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ರಾಜೇಶ್ ಪ್ರಭು ಪಿಸ್ತೂಲ್ ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ಗುಂಡು ನೇರವಾಗಿ ಮಗನ ಎಡಗಣ್ಣಿನ ಸಮೀಪದಿಂದ ಹಾದು ಹೋಗಿತ್ತು ಎನ್ನಲಾಗಿದೆ.
ಇದೀಗ ತಂದೆಯ ಗುಂಡೇಟಿನಿಂದಾಗಿ ಇದೀಗ 16 ವರ್ಷದ ಸುಧೀಂದ್ರ ಪ್ರಭುವಿನ ಮೆದುಳು ನಿಷ್ಕ್ರಿಯವಾಗಿದ್ದು, ಅಂಗಾಂಗ ಪ್ರಕ್ರಿಯೆ ನಡೆಯುತ್ತಿದೆ. ಮಗನ ಮೆದುಳು ನಿಷ್ಕ್ರಿಯಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೇಶ್ ಪ್ರಭುವಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಸಾವಿನ ಕೊನೆಯ ಕ್ಷಣದಲ್ಲಿ “ಅಪ್ಪಾ ಬೇಗ ಬನ್ನಿ” ಎಂದು ಮಗ ಹೇಳಿದ್ದ | ಮಗನ ಸಾವು ನೆನೆದು ಬಿಕ್ಕಿಬಿಕ್ಕಿ ಅತ್ತ ರೈತ
ಕೇರಳದ ಮೂಲದ ವಿದ್ಯಾರ್ಥಿನಿ ಮಂಗಳೂರಿನ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ!
ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ರೈತರ ಹತ್ಯೆ ನಡೆದಿದೆ | ರವಿಕಿರಣ್ ಪೂನಚ
ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯವೂ ಇಲ್ಲ | ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ಅಮಾನವೀಯ ಘಟನೆ: ರಾತ್ರೋ ರಾತ್ರಿ ಮನೆಯಲ್ಲಿದ್ದವರನ್ನ ಹೊರದಬ್ಬಿ ಬೀಗ ಜಡಿದ ಬ್ಯಾಂಕ್ ಸಿಬ್ಬಂದಿ!
ಆರೆಸ್ಸೆಸ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಅಜ್ಞಾನ, ಭೀತಿ, ವೈಯಕ್ತಿಕ ಹತಾಶೆಯಾಗಿದೆ | ಬಿ.ವೈ.ವಿಜಯೇಂದ್ರ ಕಿಡಿ
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಬರ್ಬರ ಹತ್ಯೆ | ತಾಯಿ ಹಾಗೂ ಆಕೆಯ ಪ್ರಿಯಕರ ಅರೆಸ್ಟ್