ಬೋರ್ ವೇಲ್ ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ತಿರುವು: ತಂದೆಯಿಂದಲೇ ನಡೆದಿತ್ತು ಹೀನ ಕೃತ್ಯ - Mahanayaka
7:57 PM Wednesday 10 - September 2025

ಬೋರ್ ವೇಲ್ ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ತಿರುವು: ತಂದೆಯಿಂದಲೇ ನಡೆದಿತ್ತು ಹೀನ ಕೃತ್ಯ

belagavi
19/09/2021

ಬೆಳಗಾವಿ: ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಶರತ್ ಹಸಿರೆ ಎಂಬ ಎರಡೂವರೆ ವರ್ಷ ವಯಸ್ಸಿನ ಮಗು ಬೋರ್ ವೇಲ್ ಗೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ತಿರುವು ದೊರಕಿದ್ದು, ಮಗುವನ್ನು ತಂದೆಯೇ ಹತ್ಯೆ ಮಾಡಿ ಬೋರ್ ವೇಲ್ ಗೆ ತಳ್ಳಿದ್ದಾನೆ ಎನ್ನುವುದು ಇದೀಗ ಬಯಲಿಗೆ ಬಂದಿದೆ.


Provided by

ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಿದ್ದಪ್ಪ, ಈ ಮಗು ನನ್ನದಲ್ಲ ಎಂದು ಪದೇ ಪದೇ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಗಲಾಟೆ ನಡೆಸುತ್ತಿದ್ದ. ಅಲ್ಲದೇ ಮಗನನ್ನು ಕಂಡರೆ ಕೆಂಡಮಂಡಲವಾಗುತ್ತಿದ್ದ ಎನ್ನಲಾಗಿದೆ.

ಈ ಗಲಾಟೆಯನ್ನು ಗ್ರಾಮದ ಮುಖಂಡರು, ಕುಟುಂಬಸ್ಥರು ರಾಜಿ ಪಂಚಾಯಿತಿ ನಡೆಸಿದ್ದರು. ಆದರೂ ಸಿದ್ದಪ್ಪ ಬದಲಾಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಗು ಶರತ್ ಆತನ ಅಜ್ಜಿ ಮನೆಯಲ್ಲಿ ಬೆಳೆಯುತ್ತಿದ್ದ. ನಾಲ್ಕು ದಿನಗಳ ಹಿಂದೆಯಷ್ಟೇ ಮಗು ಮನೆಗೆ ಬಂದಿತ್ತು. ಮಗು ಮನೆಗೆ ಬಂದ ತಕ್ಷಣವೇ ಕೊಲೆ ಮಾಡಲು ಸಿದ್ದಪ್ಪ ಸಂಚು ಹೂಡಿದ್ದ ಎನ್ನಲಾಗಿದೆ.

ಮಗು ನಾಪತ್ತೆಯಾದ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಆಗಮಿಸಿದ್ದರು. ಈ ವೇಲೆ ಪೊಲೀಸರನ್ನು ಬೋರ್ ವೇಲ್ ಬಳಿಗೆ ಕರೆದೊಯ್ದಿದ್ದ ಈ ವೇಳೆ ಮಗು ಬೋರ್ ವೇಲ್ ನೊಳಗೆ ಸಿಲುಕಿರುವುದು ಗೊತ್ತಾಗಿದೆ. ಅದೇ ಸಂದರ್ಭದಲ್ಲಿ ಆರೋಪಿ ಸಿದ್ದಪ್ಪನಿಗೆ ಮಗನ ಮೇಲೆ ಇಷ್ಟವಿರಲಿಲ್ಲ ಎನ್ನುವ ವಿಚಾರವನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಬಾಯಿಬಿಟ್ಟಿದ್ದಾರೆ. ಪೊಲೀಸರು ತಮ್ಮ ಶೈಲಿಯಲ್ಲಿ ಸಿದ್ದಪ್ಪನನ್ನು ವಿಚಾರಣೆ ನಡೆಸಿದಾಗ ಒಂದೊಂದೇ ವಿಚಾರವನ್ನು ಬಾಯಿಬಿಟ್ಟಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬೋರ್ ವೇಲ್ ನೊಳಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ದಾರುಣ ಸಾವು!

ಮಗಳನ್ನು ಚುಡಾಯಿಸಬೇಡ ಎಂದಿದ್ದಕ್ಕೆ ಬಾಲಕಿಯ ತಂದೆಗೆ ಮಾರಣಾಂತಿಕ ಹಲ್ಲೆ!

ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ!

ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯದಾಗುವುದಿಲ್ಲ | ಶೋಭಾ ಕರಂದ್ಲಾಜೆ

12 ವರ್ಷಗಳ ಬಳಿಕ ಒಂದಾದ ತಾಯಿ ಮಗ | ವಿಶ್ವಾಸದ ಮನೆಯಲ್ಲೊಂದು ಭಾವನಾತ್ಮಕ ಸನ್ನಿವೇಶ

ದೇವಸ್ಥಾನದಲ್ಲಿ ಕೇಳಬಾರದ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ನಟಿ ಸಮಂತಾ ಆಕ್ರೋಶ!

ಶಾರ್ಟ್ಸ್, ಟೀಶರ್ಟ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ | ಆ ಬಳಿಕ ಪರೀಕ್ಷಾ ಕೇಂದ್ರದಲ್ಲಿ ನಡೆದದ್ದೇನು ಗೊತ್ತಾ?

 

ಇತ್ತೀಚಿನ ಸುದ್ದಿ