ಒಂದೇ ದಿನ ಮಹಿಳೆ ಮೂರು ಬಾರಿ ಕೊವಿಡ್ ವ್ಯಾಕ್ಸಿನ್ ಚುಚ್ಚಿದ ಸಿಬ್ಬಂದಿ!
ಥಾಣೆ: ಒಂದೇ ದಿನ ಮಹಿಳೆಯೊಬ್ಬರಿಗೆ ಮೂರು ಬಾರಿ ಕೊವಿಡ್ ವ್ಯಾಕ್ಸಿನ್ ನೀಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಮಹಾನಗರ ಪಾಲಿಕೆಯ ಆನಂದನಗರ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ನಡೆದಿದ್ದು, ಘಟನೆಯ ಬಳಿಕ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಘಟನೆಯನ್ನು ಮರೆಮಾಚಿದ್ದಾರೆ ಎನ್ನುವ ಆರೋಪ ಹೇಳಿ ಬಂದಿದೆ.
ತೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವೈಭವ್ ಸಾಲ್ವೆ ಅವರ ಪತ್ನಿಗೆ ಜೂನ್ 25ರಂದು ಮೊದಲ ಕೊವಿಡ್ ಲಸಿಕೆ ನೀಡಲಾಗಿದೆ. ಇದರ ಬೆನ್ನಲ್ಲೇ ಅದೇ ದಿನ ಲಸಿಕೆಯ ಎರಡನೇ ಹಾಗೂ ಮತ್ತೊಂದು ಡೋಸ್ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ವಿಚಾರ ವೈದ್ಯರಿಗೆ ತಿಳಿಯುತ್ತಿದ್ದಂತಯೇ ಮಹಿಳೆಯ ಮೇಲೆ ಗಂಟೆಗಳ ಕಾಲ ನಿಗಾ ಇಟ್ಟಿದ್ದಾರೆ. ಇನ್ನೂ ವಿಚಾರವನ್ನು ಹೊರಗಡೆ ಹೇಳದಂತೆ ಮಹಿಳೆಯ ಪತಿಗೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವಿಚಾರ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಗೆ ತಿಳಿದು ಬಂದಿದ್ದರಿಂದಾಗಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಇನ್ನೂ ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ಪುರಸಭೆ ಆಯುಕ್ತರು ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ವೈದ್ಯಕೀಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.