10:07 PM Wednesday 12 - March 2025

ತಂಗಿಯ ಗಂಡನನ್ನೇ ಕೊಚ್ಚಿಕೊಂದ ಅಣ್ಣ, ಚಿಕ್ಕಪ್ಪ; ಯುವತಿಯ ಜೀವನ ನರಕ ಮಾಡಿಯೂ ನೆಮ್ಮದಿ ಕಿತ್ತುಕೊಂಡರು!

17/02/2021

ಬೆಂಗಳೂರು: ಬಲವಂತದ ಮದುವೆ ನಡೆಸಿದರೂ ಆಕೆ ತಾನು ಪ್ರೀತಿಸಿದವನನ್ನು ಬಿಡಲಿಲ್ಲ. ಇಷ್ಟಪಟ್ಟವರ ಜೊತೆ ಬದುಕಲು ಕುಟುಂಬಸ್ಥರು ಬಿಡಲಿಲ್ಲ. ಆಕೆಯ ಕೊನೆಯ ಪ್ರಯತ್ನವೂ ನಡೆಯಲಿಲ್ಲ.  ಇಂತಹದ್ದೊಂದು ವಿಲಕ್ಷಣ ಘಟನೆ ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ನಡೆದಿದೆ.

ಭೂಮಿಕಾ ಮತ್ತು ಚೇತನ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯವರು ಬಲವಂತವಾಗಿ ಭೂಮಿಕಾಳನ್ನು ವಿಜಯ್ ಎಂಬಾತನಿಗೆ ಮದುವೆ ಮಾಡಿಸಿದ್ದರು. ಮದುವೆಯಾಗಿ ಒಂದು ವಾರದೊಳಗೆ ಭೂಮಿಕಾ ವಿಜಯ್ ನನ್ನು ಬಿಟ್ಟು ಚೇತನ್ ಜೊತೆಗೆ ಬಂದಿದ್ದಳು.

ಇಷ್ಟವಿಲ್ಲದವರ ಜೊತೆಗೆ ಬಾಳಲು ಸಾಧ್ಯವಾಗದೇ ಬಂದ ಭೂಮಿಕಾ, ತಾನು ಇಷ್ಟಪಟ್ಟಿದ್ದ ಚೇತನ್ ಜೊತೆಗೆ ಎರಡು ತಿಗಳ ಹಿಂದೆಯಷ್ಟೇ ವಿವಾಹವಾಗಿದ್ದಾಳೆ. ತಂಗಿ ಇಷ್ಟಪಟ್ಟವನ ಜೊತೆ ಮದುವೆ ಮಾಡಲು ಯೋಗ್ಯತೆ ಇಲ್ಲದ ಭೂಮಿಕಾಳ ಅಣ್ಣ ಆಕಾಶ್, ತನ್ನ ತಂಗಿ ಬೇರೆಯುವಕನ ಜೊತೆಗೆ ಹೋದಳು  ಇದರಿಂದ ಮರ್ಯಾದೆ ಹೋಗಿದೆ ಎಂದು ಅನ್ನಿಸಿದೆ. ಈತ ತನ್ನ ಚಿಕ್ಕಪ್ಪನ ಜೊತೆಗೆ ಸೇರಿಕೊಂಡು ಭೂಮಿಕಾಳಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದಾನೆ.

ಚೇತನ್ ಬರ್ತ್ ಡೇ ದಿನದಂದು ಚೇತನ್ ಗೆ ವಿಶ್ ಮಾಡುವ ನೆಪದಲ್ಲಿ ಅಣ್ಣ  ಆಕಾಶ್ ಹಾಗೂ ಚಿಕ್ಕಪ್ಪ ನಂಜೇಗೌಡ ಹಾಗೂ ಇನ್ನೋರ್ವ ದೀಪಕ್ ಎಂಬಾತ ಬಂದಿದ್ದು, ಕೇಕ್ ಕೂಡ ತಂದಿದ್ದರು. ಅಣ್ಣಾ, ಚಿಕ್ಕಪ್ಪ ಕೊನೆಗೂ ತನ್ನ ಪ್ರೀತಿಯನ್ನು ಒಪ್ಪಿದರು ಎನ್ನುವ ಖುಷಿಯಲ್ಲಿದ್ದ ಭೂಮಿಕಾಳಿಗೆ ಇವರ ವಿಷಕಾರಿ ಮನಸ್ಥಿತಿ ತಿಳಿದಿರಲಿಲ್ಲ.

ಮನೆಗೆ ಬಂದ ದುಷ್ಟರು ಏನೋ ನೆಪ ಹೇಳಿ ಭೂಮಿಕಾಳನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಇವರ ದುಷ್ಟ ಬುದ್ಧಿ ತಿಳಿಯದ ಭೂಮಿಕಾ ಹೊರಗೆ ಹೋಗಿದ್ದು, ಈ ವೇಳೆ ಮಾರಕಾಸ್ತ್ರಗಳಿಂದ  ಚೇತನನ್ನು ಕೊಚ್ಚಿ ಹತ್ಯೆ ಮಾಡಿ, ಆರೋಪಿಗಳು ಪರಾರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version