ನಡು ರಸ್ತೆಯಲ್ಲಿಯೇ ತಂಗಿಗೆ ಚಾಕುವಿನಿಂದ ಇರಿದು ಕೊಂದ ಅಣ್ಣಂದಿರು! - Mahanayaka
8:05 AM Wednesday 11 - December 2024

ನಡು ರಸ್ತೆಯಲ್ಲಿಯೇ ತಂಗಿಗೆ ಚಾಕುವಿನಿಂದ ಇರಿದು ಕೊಂದ ಅಣ್ಣಂದಿರು!

uttar pradesh
29/07/2021

ಲಕ್ನೋ: ಪ್ರೀತಿಸಿ, ಓಡಿ ಹೋಗಿ ಮದುವೆಯಾಗಿದ್ದಕ್ಕೆ ತಂಗಿಯನ್ನು ಅಣ್ಣಂದಿರು ನಡು ರಸ್ತೆಯಲ್ಲಿ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ವಿವಾಹವಾಗಿದ್ದಕ್ಕೆ ತಂಗಿ ಎಂದೂ ನೋಡದೇ ಅಣ್ಣಂದಿರು ನಡು ರಸ್ತೆಯಲ್ಲಿಯೇ ತಂಗಿಯನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.

ಜೂನ್ 28ರಂದು ತನ್ನ ಸಂಬಂಧಿಯೇ ಆಗಿರುವ ದೇವೇಂದ್ರ ಎಂಬಾತನೊಂದಿಗೆ  ಅರ್ಚನಾ ಎಂಬಾಕೆ ಓಡಿ ಹೋಗಿ ಮದುವೆಯಾಗಿದ್ದಳು. ಮದುವೆಯ ಬಳಿಕ  ಉತ್ತರ ಪ್ರದೇಶದ ಪಲಿಯಾ ಗುಜಾರ್ ಬಳಿಯಲ್ಲಿ ಪತಿಯ ಮನೆಯಲ್ಲಿಯೇ ವಾಸಿಸುತ್ತಿದ್ದಳು ಎನ್ನಲಾಗಿದೆ.

ಅರ್ಚನಾ ಹಾಗೂ ದೇವೇಂದ್ರನ ಮದುವೆ ಅರ್ಚನಾಳ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ದೇವೇಂದ್ರ ತಮ್ಮ ಮಗಳನ್ನು ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಅರ್ಚನಾಳ ಮನೆಯವರು ದೂರು ದಾಖಲಿಸಿದ್ದರು. ದೂರು ದಾಖಲಿಸಿದ ಬಳಿಕ ಅರ್ಚನಾಳನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ.

ಇತ್ತ ತಂದೆ ಹಾಗೂ ಅಣ್ಣಂದಿರು ದಾಖಲಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ದತ್ತಗಂಜ್ ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಲು ಅರ್ಚನಾ ತನ್ನ ಪತಿ ದೇವೇಂದ್ರ ಮತ್ತು ಆತನ ತಮ್ಮಂದಿರೊಂದಿಗೆ ಬರುತ್ತಿದ್ದಾಗ ಅಡ್ಡ ಹಾಕಿದ ಅರ್ಚನಾಳ ಅಣ್ಣಂದಿರು ಹಾಗೂ ಇನ್ನಿತರ ದುಷ್ಕರ್ಮಿಗಳು ನಡು ರಸ್ತೆಯಲ್ಲಿಯೇ ಅರ್ಚನಾಳ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ಅದಾಗಲೇ ಅರ್ಚನಾ ಸಾವನ್ನಪ್ಪಿದ್ದಳು.

ಇನ್ನೂ ಪೊಲೀಸ್ ಠಾಣೆಯಿಂದ 100 ಕಿ.ಮೀ. ದೂರದಲ್ಲಿಯೇ ಅರ್ಚನಾಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಠಾಣೆಗೆ ನಾವು ಬರುತ್ತಿದ್ದ ವೇಳೆ ನಾಲ್ವರು ನಮ್ಮನ್ನು ಅಡ್ಡಗಟ್ಟಿದರು. ಆ ನಾಲ್ವರಲ್ಲಿ ಇಬ್ಬರು ಅರ್ಚನಾಳ ಅಣ್ಣಂದಿರು ಎಂದು ಪತಿ ದೇವೇಂದ್ರ ತಿಳಿಸಿದ್ದಾನೆ.

ಇನ್ನಷ್ಟು ಸುದ್ದಿಗಳು…

ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ

ಮಗುಚಿ ಬಿದ್ದ ಆಟೋ ರಿಕ್ಷಾ: ವೃದ್ಧ ಸ್ಥಳದಲ್ಲಿಯೇ ಸಾವು, ಇಬ್ಬರ ಸ್ಥಿತಿ ಗಂಭೀರ

ಯಡಿಯೂರಪ್ಪ ಮೇಲೆ ಮೃಧು ಧೋರಣೆ, ಕಾಂಗ್ರೆಸ್ ತೋರುತ್ತಿರುವ ನಾಟಕ | ಹೆಚ್.ಡಿ.ಕುಮಾರಸ್ವಾಮಿ

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ

 

ಇತ್ತೀಚಿನ ಸುದ್ದಿ