ಶಾಕಿಂಗ್ ನ್ಯೂಸ್: ತಾನು ತೊಟ್ಟಿದ್ದ ಮಾಸ್ಕ್ ಬಿಚ್ಚಿ ಮಾಜಿ ಸಂಸದಗೆ ತೊಡಿಸಿದ ಕೇಂದ್ರ ಸಚಿವ!

jyotiraditya scindia
23/09/2021

ಗ್ವಾಲಿಯರ್: ಮಾಸ್ಕ್ ತೊಡುವುದು ಎಷ್ಟು ಮುಖ್ಯವೋ, ಹಾಗೆಯೇ ಸ್ವಚ್ಛವಾದ ಮಾಸ್ಕ್ ನ್ನು ತೊಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಒಬ್ಬನ ಚಪ್ಪಲಿಯನ್ನು ಇನ್ನೊಬ್ಬ ಧರಿಸಬಹುದು. ಆದರೆ, ಒಬ್ಬನ ಮಾಸ್ಕ್ ನ್ನು ಇನ್ನೊಬ್ಬ ಧರಿಸುವುದು ಎಂದರೆ, ಯಾರೂ ಮುಂದೆ ಬರಲಿಕ್ಕಿಲ್ಲ. ಆದರೆ, ಇಲ್ಲೊಬ್ಬ ಕೇಂದ್ರ ಸಚಿವ ತಾನು  ತೊಟ್ಟಿದ್ದ ಮಾಸ್ಕ್ ನ್ನು ತೆಗೆದು ಮಾಜಿ ಸಂಸದರೊಬ್ಬರಿಗೆ ತೊಡಿಸಿದ ವಿಲಕ್ಷಣ ಘಟನೆ ನಡೆದಿದೆ.

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದ್ದು,  ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರು ಕಾರ್ಯಕ್ರಮಕ್ಕೆ ಹೋದ ವೇಳೆ ಮಾಸ್ಕ್ ಧರಿಸದ ಮಾಜಿ ಸಂಸದ ರೊಬ್ಬರಿಗೆ ತಾನು ತೊಟ್ಟಿದ್ದ ಮಾಸ್ಕ್ ನ್ನೇ ತೊಡಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಈ ವಿಡಿಯೋವನ್ನು ಟೈಮ್ಸ್ ನೌ ಪ್ರಸಾರ ಮಾಡಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಇದು ಭಾರೀ ಚರ್ಚೆಗೀಡಾಗಿದೆ. ಗ್ವಾಲಿಯರ್ ನ ಮಾಜಿ ಸಂಸದ ಅರುಣ್ ಮಿಶ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಂಧ್ಯ ಅವರನ್ನು ಸ್ವಾಗತಿಸಲು ತೆರಳಿದ್ದು, ಈ ವೇಳೆ ಮಾಸ್ಕ್ ತೊಟ್ಟಿರಲಿಲ್ಲ. ವೇಳೆ ಸಿಂಧ್ಯ ತಾನು ತೊಟ್ಟಿದ್ದ ಮಾಸ್ಕ್ ನ್ನೇ ತೆಗೆದು ಅವರಿಗೆ ತೊಡಿಸುವ ಮೂಲಕ ವಿವಾದ ಸೃಷ್ಟಿಸಿದರು.

ಇನ್ನೂ ಈ ಘಟನೆಯನ್ನು ಟೀಕಿಸಿರುವ ವಿಪಕ್ಷಗಳು, ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ಬಿಜೆಪಿಗರು ಕಾರ್ಯಕ್ರಮ ಮಾಡುತ್ತಾರೆ. ಆದರೆ, ಒಬ್ಬ ಬಳಸಿದ ಮಾಸ್ಕ್ ನ್ನೇ ಮತ್ತೊಬ್ಬರು ಬಳಸುತ್ತೀರಲ್ಲಾ? ಎಂದು ಲೇವಡಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಬಿಜೆಪಿ ನಾಯಕರೊಬ್ಬರ ಕಚೇರಿಯಲ್ಲಿ  ಮಹಿಳಾ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ!

ಹಾಲು ಬೇಕೆಂದು ಹಠ ಮಾಡುತ್ತಿದ್ದ ಮಗುವನ್ನು ನೆಲಕ್ಕೆ ಬಡಿದು ಹತ್ಯೆ ಮಾಡಿದ ತಾಯಿ!

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ: ಗ್ಯಾಸ್ ಸಿಲಿಂಡರ್ ಸಿಡಿದು ಮೂವರು ಸಾವು

ಮದುವೆ ಮಂಟಪದಲ್ಲಿ ಗುಟ್ಕಾ ಜಗಿದ ವರನಿಗೆ ಕಪಾಳಕ್ಕೆ ಬಾರಿಸಿ ಉಗುಳಿಸಿದ ವಧು! | ವಿಡಿಯೋ ವೈರಲ್

ಪತ್ನಿಯ ಕುತ್ತಿಗೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ!

ಅಂಗಡಿಗೆ ನುಗ್ಗಿ 2 ಗೋಣಿ ಸಿಗರೇಟ್. ಗುಟ್ಕಾ ಕಳವು ಮಾಡಿದ ಕಳ್ಳರು!

ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರ ದಾರುಣ ಸಾವು

ಇತ್ತೀಚಿನ ಸುದ್ದಿ

Exit mobile version