ತನ್ನ ಸಹಚರರ ಜೊತೆ ಸೇರಿ ಪತ್ನಿಯನ್ನೇ ಮುಗಿಸಿದ ಇನ್ಸ್ ಪೆಕ್ಟರ್! - Mahanayaka
10:22 AM Thursday 12 - December 2024

ತನ್ನ ಸಹಚರರ ಜೊತೆ ಸೇರಿ ಪತ್ನಿಯನ್ನೇ ಮುಗಿಸಿದ ಇನ್ಸ್ ಪೆಕ್ಟರ್!

ahmadabad
26/07/2021

ಅಹ್ಮದಾಬಾದ್: ಪತ್ನಿಯನ್ನು ತನ್ನ ಸಹಚರರ ಜೊತೆಗೆ ಸೇರಿ ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವೋರ್ವನನ್ನು ಗುಜರಾತ್ ನ ಅಹ್ಮದಾಬಾದ್ ನಲ್ಲಿ  ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದು, ಪತ್ನಿಯನ್ನು ತನ್ನ ಜೊತೆಗಾರರ ಜೊತೆ ಸೇರಿ ಹತ್ಯೆ ಮಾಡಿದ್ದ ಇನ್ಸ್ ಪೆಕ್ಟರ್, ಬಳಿಕ ನಾಪತ್ತೆಯ ಕಥೆ ಕಟ್ಟಿದ್ದ.

ಒಂದೂವರೆ ತಿಂಗಳ ಹಿಂದೆ ಗುಜರಾತ್ ನ ವಡೋದರಾ ಜಿಲ್ಲೆಯ ಕರ್ಜಾನಾ ಪ್ರದೇಶದಲ್ಲಿ ಸಬ್ ಇನ್ಸ್ ಪೆಕ್ಟರ್ ಅಜಯ್ ದೇಸಾಯಿಯ ಪತ್ನಿ ಸ್ವೀಟಿ ಪಟೇಲ್ ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿ ಹೋದ ಪೊಲೀಸರಿಗೆ ಆರಂಭದಲ್ಲಿ ಕ್ರಿಸ್ಟಿನಾ ಜಡೇಜಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಕ್ರಿಸ್ಟಿನಾ ಜಡೇಜಾ 2020ರಲ್ಲಿ ಕರ್ಜಾನಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯೂ ಆಗಿದ್ದಾನೆ. ಈತ ಹಾಗೂ  ಸ್ವೀಟಿ ಪಟೇಲ್ ಪತಿ ಅಜೆಟ್ ದೇಸಾಯಿಗೂ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ಮಾಹಿತಿ ಕಲೆಹಾಕಿದಾಗ  ಜೂನ್ 4 ಮತ್ತು 5 ರಾತ್ರಿ ಸ್ವೀಟಿ ಪಟೇಲ್ ನ್ನು ಜಡೇಜಾ ಒಡೆತನದ ನಿರ್ಮಾಣ ಹಂತದ ಕಟ್ಟಡದಲ್ಲಿರಿಸಿ ಹತ್ಯೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿರುವುದು ಬಯಲಿಗೆ ಬಂದಿದೆ.

ಭರೂಚ್ ಜಿಲ್ಲೆಯ ಅಟಾಲಿ ಗ್ರಾಮದ ದಾಹೇಜ್ ಹೈವೇ ಸಮೀಪದಲ್ಲಿ ಅಜಯ್ ದೇಸಾಯಿ ತನ್ನ ಸಹಚರರ ಜೊತೆ ಸೇರಿ ಈ ಹತ್ಯೆ ಮಾಡಿದ್ದ. ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಅಹ್ಮದಾಬಾದ್ ಕ್ರೈಂಬ್ರ್ಯಾಂಚ್ ಇನ್ಸ್ ಪೆಕ್ಟರ್ ಡಿಬಿ ಬರಾದ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ