ತಪ್ಪಾಗಿದ್ರೆ ಕ್ಷಮಿಸಿ ಸಿದ್ದರಾಮಯ್ಯನವರೇ: ಹಣ ಎಸೆದ ಮಹಿಳೆ ವಿಷಾದ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನೊಳಗೆ ಹಣ ಎಸೆದ ಮಹಿಳೆ ಇದೀಗ ಕ್ಷಮೆಯಾಚಿಸಿದ್ದು, ನಾವು ಸಿದ್ದರಾಮಯ್ಯನವರ ಮೇಲಿನ ಕೋಪಕ್ಕೆ ಈ ರೀತಿ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ವರದಿಯ ಪ್ರಕಾರ, ಈ ಘಟನೆ ಆದ ಮೇಲೆ ಯಾರು ಕೂಡ ನಮ್ಮ ನೋವನ್ನು ಕೇಳಲು ಬಂದಿರಲಿಲ್ಲ. ಹೀಗಾಗಿ ನಮಗೆ ಬೇಸರವಾಗಿತ್ತು. ಸಿದ್ದರಾಮಯ್ಯನವರು ಬಂದಾಗ ಅವರ ಬಳಿ ನಮಗೆ ದುಡ್ಡು ಬೇಡ ನ್ಯಾಯ ಬೇಕು ಎಂದು ಕೇಳಿದ್ದೆವು. ಆದರೆ ಅವರು ಹಣ ವಾಪಸ್ ಪಡೆದುಕೊಳ್ಳದೇ ಇದ್ದಾಗ ಕಾರು ಚಲಿಸುತ್ತಿದ್ದ ವೇಳೆ ಕಾರಿನೊಳಗೆ ಹಾಕಲು ಯತ್ನಿಸಿದ್ದೇವೆ. ನಾನು ಎಸೆದಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ.
ನಮ್ಮ ಮೇಲೆ ಹಲ್ಲೆಯಾಗಿದ್ದರೂ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ನಮ್ಮ ಬಳಿ ಯಾರು ಕೂಡ ಬಂದಿರಲಿಲ್ಲ. ಇದರಿಂದಾಗಿ ನಾವು ಆರೀತಿಯಾಗಿ ಮಾತನಾಡಿದ್ದೆವು ಎಂದು ವಿಷಾಧ ವ್ಯಕ್ತಪಡಿಸಿದ ಮಹಿಳೆ, ನಾನು ಹಣ ಬೇಡ ಎಂದು ಕಾರಿನ ಬಳಿಗೆ ಹೋದಾಗ ಕಾರು ಮುಂದಕ್ಕೆ ಚಲಿಸಿತು. ಹಾಗಾಗಿ ಹಣವನ್ನು ಕಾರಿನೊಳಗೆ ಎಸೆದಿದ್ದೆ, ತಪ್ಪಾಗಿದ್ರೆ ಕ್ಷಮಿಸಿ ಸಿದ್ದರಾಮಯ್ಯನವರೇ ಎಂದು ಕ್ಷಮೆಯಾಚಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka