ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್ - Mahanayaka
10:31 AM Thursday 12 - December 2024

ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್

bangalore news
12/03/2022

ಬೆಂಗಳೂರು: ಆರು ವರ್ಷಗಳ ಬಳಿಕ ತಾಯಿ ಮತ್ತು ಮಾತು ಬಾರದ ಮಗನನ್ನು ಆಧಾರ್ ಕಾರ್ಡ್ ಒಂದು ಮಾಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

2016ರ ಮಾರ್ಚ್‍ನಲ್ಲಿ ಪಾರ್ವತಮ್ಮ ಅವರು ಮಾತು ಬಾರದ 13 ವರ್ಷದ ಮಗನ ಜೊತೆ ತರಕಾರಿ ಮಾರಾಟಕ್ಕೆ ಬಂದಿದ್ದರು. ಈ ವೇಳೆ ಭರತ್ ದಿಢೀರ್‌ ನಾಪತ್ತೆಯಾಗಿದ್ದರು. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ಕೂಡ ದಾಖಲಿಸಿದ್ದರು.

ಯಲಹಂಕದಿಂದ ತಪ್ಪಿಸಿಕೊಂಡ ಭರತ್, ಹತ್ತು ತಿಂಗಳ ಬಳಿಕ ನಾಗ್ಪುರ ರೈಲ್ವೆ ನಿಲ್ದಾಣ ತಲುಪಿದ್ದು, ಈ ವೇಳೆ ದಿಕ್ಕು ಕಾಣದೇ ಕಂಗೆಟ್ಟು ಓಡಾಡುತ್ತಿದ್ದ ಭರತ್‍ ನನ್ನು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ರಕ್ಷಿಸಿ, ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿದ್ದರು.

6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‍ ಗೆ ಆಧಾರ್ ಕಾರ್ಡ್ ಮಾಡಿಸಲು ಪುನರ್ ವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿ, 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್‍ ನನ್ನು ಮಹೇಶ್ ಎಂಬ ಅಧಿಕಾರಿ ಕರೆದೊಯ್ದಿದ್ದರು.

ಭರತ್ ಬೆರಳು ಮುದ್ರೆ ಪಡೆದು ಆಧಾರ್ ಸೇವಾ ಕೇಂದ್ರಕ್ಕೆ ಅಧಿಕಾರಿಗಳು ಕಳುಹಿಸಿದ್ದರು. ಈ ವೇಳೆ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ ಅವರು ಭರತ್‍ ನ ಹೊಸ ಆಧಾರ್ ಕಾರ್ಡ್ ತಿರಸ್ಕೃತವಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊನೆಗೆ ನಾಗ್ಪುರ ಪುನರ್ವಸತಿ ಕೇಂದ್ರ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸಿ ಭರತ್ ತಾಯಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಪಾರ್ವತಮ್ಮ ಅವರನ್ನು ಪೊಲೀಸರ ಜೊತೆ ನಾಗ್ಪುರಕ್ಕೆ ಕಳುಹಿಸಿದ್ದಾರೆ. ಮಾ.7 ರಂದು ಮಗನನ್ನು ಕಂಡು ಪಾರ್ವತಮ್ಮ ಅವರು ಭಾವುಕರಾಗಿ ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆ ತಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್

ಪತಿಯನ್ನೇ ಕೊಲೆಗೈದ ಮಹಿಳಾ ಮೋರ್ಚಾ ಅಧ್ಯಕ್ಷೆ

ಬಿಜೆಪಿಯ ಸರಪಂಚ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ ಉಗ್ರರು!

ಯಡಿಯೂರಪ್ಪನವರನ್ನು ಕಿತ್ತು ಹಾಕಿದರು ಎಂದ ಸಿದ್ದರಾಮಯ್ಯ: ಎದ್ದು ನಿಂತು ಮಾತನಾಡಿದ ಬಿಎಸ್ ವೈ

ಪಾಕಿಸ್ತಾನದೊಳಗೆ ಆಕಸ್ಮಿಕವಾಗಿ ಉಡಾವಣೆಯಾದ ಭಾರತೀಯ ಸೂಪರ್ ಸಾನಿಕ್ ಕ್ಷಿಪಣಿ!

 

ಇತ್ತೀಚಿನ ಸುದ್ದಿ