ತಾಯಿ ಮೃತಪಟ್ಟರೂ ಗರ್ಭದಲ್ಲಿದ್ದ ಮಗುವನ್ನು ರಕ್ಷಿಸಿದ ವೈದ್ಯರು! | ಅಪರೂಪದ ಘಟನೆ - Mahanayaka
6:31 AM Friday 20 - September 2024

ತಾಯಿ ಮೃತಪಟ್ಟರೂ ಗರ್ಭದಲ್ಲಿದ್ದ ಮಗುವನ್ನು ರಕ್ಷಿಸಿದ ವೈದ್ಯರು! | ಅಪರೂಪದ ಘಟನೆ

gadaga doctors
12/11/2021

ಗದಗ: ಹೆರಿಗೆ ನೋವಿನ ವೇಳೆ ತಾಯಿ ಮೃತಪಟ್ಟಿದ್ದು, ಆದರೆ, ಗರ್ಭದಲ್ಲಿ ಮಗು ಜೀವಂತವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮೃತದೇಹದ ಗರ್ಭದಲ್ಲಿದ್ದ ಮಗುವನ್ನು ಹೊರ ತೆಗೆದು ರಕ್ಷಿಸಿದ್ದಾರೆ.

ರೋಣ ತಾಲೂಕಿನ ಮುಶಿಗೇರಿಯ ತುಂಬು ಗರ್ಭಿಣಿ ಅನ್ನಪೂರ್ಣ ಅಬ್ಬಿಗೇರಿ ಅವರಿಗೆ ನ.4ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಆಕೆ ತುಂಬು ಗರ್ಭಿಣಿಯಾಗಿದ್ದು, ಮೂರ್ಛೆ ರೋಗ ಕಾಣಿಸಿಕೊಂಡು ಆಕೆ ತೀವ್ರ ಅಸ್ವಸ್ಥಳಾಗಿದ್ದಳು. ಕುಟುಂಬಸ್ಥರು ಇರುವ ಆಸ್ಪತ್ರೆಗಳಿಗೆಲ್ಲ ಅಲೆದಾಡಿ ಕೊನೆಗೆ ಗದಗದ ಡಿಎಂಎಂ ಹೆರಿಗೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅನ್ನಪೂರ್ಣ ಅವರ ಉಸಿರು ನಿಂತು ಹೋಗಿತ್ತು.

ಮೃತ ಮಹಿಳೆ ಗರ್ಭಿಣಿಯಾಗಿರುವುದರಿಂದ ವಿಶೇಷ ಕಾಳಜಿ ವಹಿಸಿದ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ನಡೆಸಿದಾಗ ಮಗುವಿನ ಹೃದಯ ಬಡಿತ ಇರುವುದು ಗೊತ್ತಾಗಿದೆ. ಹೀಗಾಗಿ ಮಗುವನ್ನು ರಕ್ಷಿಸಲು ವೈದ್ಯರು ಮುಂದಾಗಿದ್ದಾರೆ. ತಕ್ಷಣವೇ ಕುಟುಂಬಸ್ಥರ ಜೊತೆಗೆ ಮಾತನಾಡಿ ಕೆಲವೇ ನಿಮಿಷಗಳಲ್ಲಿ ಆಪರೇಷನ್ ನಡೆಸಿ ಮಗುವನ್ನು ಹೊರ ತೆಗೆದಿದ್ದಾರೆ.


Provided by

ತಾಯಿ ಮೃತಪಟ್ಟರೂ, ವೈದ್ಯರ ಕಾಳಜಿಯಿಂದಾಗಿ ಮಗುವಿನ ಪ್ರಾಣ ಉಳಿದಿದೆ. ಸದ್ಯ ಮಗು ಆರೋಗ್ಯವಂತವಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಇನ್ನೂ, ಮೃತ ಮಹಿಳೆಯ ಪತಿ ವೀರೇಶ್ ತನ್ನ ಪತ್ನಿಯನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದ್ದು, ಮದುವೆಯಾಗಿ ಒಂದು ವರ್ಷ ಆಗಿತ್ತು. ನಾವಿಬ್ಬರು ತುಂಬಾ ಪ್ರೀತಿ ವಿಶ್ವಾಸದಿಂದ ಇದ್ದೆವು. ಆದರೆ ನನ್ನ ಹೆಂಡ್ತಿ ನನ್ನನ್ನು ಒಂಟಿ ಮಾಡಿ ಹೋಗಿದ್ದಾಳೆ. ಈ ಮಗುವನ್ನು ಚೆನ್ನಾಗಿ ಸಾಕಿ ನನ್ನ ಹೆಂಡತಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

“47ರ ಸ್ವಾತಂತ್ರ್ಯ ಭಿಕ್ಷೆ, ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ” | ನಟಿ ಕಂಗನಾ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ

ಶಾಕಿಂಗ್ ನ್ಯೂಸ್: ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಬಂಡೆಗಳು

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ | ಹೈಕೋರ್ಟ್ ಪ್ರಶ್ನೆ

ನಿಧಿಯಾಸೆಗಾಗಿ ಬೆತ್ತಲೆ ಪೂಜೆ: ಮೌಢ್ಯ ಆಚರಣೆಯಲ್ಲಿ ತೊಡಗಿದ್ದ 6 ಮಂದಿ ಅರೆಸ್ಟ್

ಅಶ್ವಿನಿ ಅಳುತ್ತಾ “ಹಿ ಇಸ್ ನೋ ಮೋರ್” ಎಂದಾಗ ಹುಚ್ಚನಂತೆ ಓಡಾಡಿದ್ದೆ | ಅಪ್ಪು ಸಾವಿನ ಸುದ್ದಿ ತಿಳಿದಾಗ ಶಿವಣ್ಣನ ಸ್ಥಿತಿ ಏನಾಗಿತ್ತು?

80 ಕೋಟಿ ಬಡವರ ಖಾತೆಗೆ ಕನ್ನ |  ಶ್ರೀಕೃಷ್ಣನ ಮೇಲೆ ಮತ್ತೊಂದು ಗಂಭೀರ ಆರೋಪ

ಇತ್ತೀಚಿನ ಸುದ್ದಿ