ತಾಯಿಗೆ ಕರೆ ಮಾಡಿ ಕಿರುಕುಳ ನೀಡಿದವನಿಗೆ ಚಾಕುವಿನಿಂದ ಇರಿದ ಸಹೋದರರು!

kerala news
02/07/2022

ಮಲಪ್ಪುರಂ: ತಾಯಿಯ ಫೋನ್‌ ಗೆ ಕರೆ ಮಾಡಿ ಕಿರುಕುಳ ನೀಡಿದ ಉತ್ತರ ಪ್ರದೇಶ ಮೂಲದ ಕಾರ್ಮಿಕನಿಗೆ ಚಾಕುವಿನಿಂದ ಇರಿದ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ನಿಲಂಬೂರು ಡಿಪೋ ಮೂಲದ ಕಲ್ಲಿಕೋಟ್ ಶರೋನ್ (27) ಮತ್ತು ಆತನ ಸಹೋದರ ಡೆನ್ನಿಸ್ ಅಲಿಯಾಸ್ ಅಪ್ಪು (25) ಅವರನ್ನು ನಿಲಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಪಿ.ವಿಷ್ಣು ನೇತೃತ್ವದಲ್ಲಿ ಬಂಧಿಸಲಾಗಿದೆ.  ಕಳೆದ ಮೇ 3 ರಂದು ನಿಲಂಬೂರ್ ರೈಲು ನಿಲ್ದಾಣದ ಬಳಿಯ ಡಿಪೋದಲ್ಲಿ ಘಟನೆ ನಡೆದಿತ್ತು.

ಆರೋಪಿಗಳ  ತಾಯಿಯ ಫೋನಿಗೆ ಕರೆ ಮಾಡಿ ಕಿರುಕುಳ ನೀಡಿದ್ದ ಉತ್ತರ ಪ್ರದೇಶ ಮೂಲದ  ಮುಹಮ್ಮದ್ ನಜ್ಮಿ ಮತ್ತು  ತಡೆಯಲು ಮುಂದಾದ ಸ್ನೇಹಿತರ ಮೇಲೂ ಸಹೋದರರು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.

ಕೃತ್ಯದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ.  ಶರೋನ್ ಮತ್ತೊಂದು ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.  ಆರೋಪಿಗಳನ್ನು ನಿಲಂಬೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉದ್ದವಾಗಿ ಕೂದಲು ಬೆಳೆಸಿದ ವಿದ್ಯಾರ್ಥಿಗಳ ಕೂದಲಿಗೆ ಕತ್ತರಿ ಪ್ರಯೋಗ!

ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ಅನಾರೋಗ್ಯದಿಂದ ಬೇಸತ್ತು ಪುಟ್ಟ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ರೋಡು ತೋಡಾಯಿತು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟಿದ್ದು ಹೀಗೆ

ಇತ್ತೀಚಿನ ಸುದ್ದಿ

Exit mobile version