ತಾಯಿಯ ಮೃತದೇಹವನ್ನು 10 ವರ್ಷ ಫ್ರೀಜರ್ ನಲ್ಲಿಟ್ಟ ಮಹಿಳೆ! - Mahanayaka

ತಾಯಿಯ ಮೃತದೇಹವನ್ನು 10 ವರ್ಷ ಫ್ರೀಜರ್ ನಲ್ಲಿಟ್ಟ ಮಹಿಳೆ!

30/01/2021

ಟೋಕಿಯೋ: ತನ್ನ ತಾಯಿಯ ಮೃತದೇಹವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟ ಘಟನೆ ಜಪಾನ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 48 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಯುಮಿ ಯೊಶಿನೋ ಬಂಧಿತ ಮಹಿಳೆಯಾಗಿದ್ದಾಳೆ.  ತನ್ನ ತಾಯಿ 60 ವರ್ಷದಲ್ಲಿರುವಾಗಲೇ ಸಾವನ್ನಪ್ಪಿದ್ದು, ಆದರೆ ಮಹಿಳೆಯು ಈ ವಿಚಾರವನ್ನು ಮುಚ್ಚಿಟ್ಟು, ತಾಯಿಯ ಮೃತದೇಹವನ್ನು ಫ್ರೀಜರ್ ನಲ್ಲಿಟ್ಟಿದ್ದಾಳೆ.

ಯುಮಿ ತಾನು ವಾಸಿಸುತ್ತಿದ್ದ ಮನೆಯ ಬಾಡಿಗೆ ಪಾವತಿಸಿರಲಿಲ್ಲ. ಹೀಗಾಗಿ ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ್ದು, ಯುಮಿ ಮನೆ ಬಿಟ್ಟು ಹೊರ ಬಂದಿದ್ದಾಳೆ.  ಮನೆಯನ್ನು ಕಾರ್ಮಿಕರು ಸ್ವಚ್ಛ ಮಾಡುತ್ತಿದ್ದ ವೇಳೆಯಲ್ಲಿ ಫ್ರೀಜರ್ ನಲ್ಲಿ ಮೃತದೇಹ ಪತ್ತೆಯಾಗಿದೆ.

ಟೋಕಿಯೋ ಮಹಾನಗರ ಪಾಲಿಕೆಯ ವಸತಿ  ಯೋಜನೆಯಡಿಯಲ್ಲಿ ಈ ಫ್ಲ್ಯಾಟ್ ನೀಡಲಾಗಿತ್ತು. ಫ್ಯ್ಲಾಟ್ ತಾಯಿಯ ಹೆಸರಿನಲ್ಲಿದ್ದು, ತಾಯಿ ಸಾವಿಗೀಡಾಗಿರುವ ವಿಚಾರ ತಿಳಿದರೆ, ಫ್ಲ್ಯಾಟ್ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಮಹಿಳೆಯು ತನ್ನ ತಾಯಿಯ ಮೃತದೇಹವನ್ನು  ಫ್ರೀಜರ್ ನಲ್ಲಿಟ್ಟಿದ್ದಳು ಎಂದು ಹೇಳಲಾಗಿದೆ.

ಮಹಿಳೆಯ ತಾಯಿ ಹೇಗೆ ಸಾವನ್ನಪ್ಪಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.  ಸದ್ಯ ಮಹಿಳೆಯನ್ನು ವಶ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ