ತಾಯಿಯ ಪ್ರಿಯಕರನಿಂದ ಮಾನಸಿಕ ಹಿಂಸೆ | ಬಾಲಕಿಯ ಅನುಮಾನಾಸ್ಪದ ಸಾವು - Mahanayaka

ತಾಯಿಯ ಪ್ರಿಯಕರನಿಂದ ಮಾನಸಿಕ ಹಿಂಸೆ | ಬಾಲಕಿಯ ಅನುಮಾನಾಸ್ಪದ ಸಾವು

09/03/2021

ಚಿಕ್ಕಮಗಳೂರು: ತಾಯಿಯ ಅಕ್ರಮ ಸಂಬಂಧಕ್ಕೆ ಮಗಳು ಬಲಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ನಡೆದಿದ್ದು, ತಾಯಿಯ ಆಕ್ರಮ ಸಂಬಂಧದಿಂದ ಮಾನಸಿಕವಾಗಿ ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

15 ವರ್ಷ ವಯಸ್ಸಿನ ಪೂರ್ಣಿಮಾ ಮೃತಪಟ್ಟ ಬಾಲಕಿಯಾಗಿದ್ದಾಳೆ. ಪ್ರಾಥಮಿಕ ಮಾಹಿತಿಯ ಪ್ರಕಾರ ತಾಯಿಯ ಅನೈತಿಕ ಸಂಬಂಧದಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಇದೊಂದು ಅನುಮಾನಾಸ್ಪದ ಪ್ರಕರಣವಾಗಿ ಮಾರ್ಪಡುತ್ತಿದೆ.

ತಾಯಿಯ ಪ್ರಿಯಕರನಿಂದ ನಿರಂತರವಾಗಿ ಬಾಲಕಿಗೆ ಮಾನಸಿಕ ಕಿರುಕುಳವಾಗುತ್ತಿದ್ದು, ಇದೇ ಕಾರಣದಿಂದ ಮನನೊಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ