ತಾಯಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಳು ಎಂದ ಮಗ | ಕೊನೆಗೂ ಬಯಲಾಯ್ತು ಸತ್ಯ!

kerala
21/06/2021

ತಿರುವನಂತಪುರಂ: ತಾಯಿಯೇ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎಂದು ಪುತ್ರ ಆರೋಪಿಸಿದ ಘಟನೆಯು ಕೇರಳದಲ್ಲಿ ಒಂದು ವಿಲಕ್ಷಣವಾದ ಪ್ರಕರಣವಾಗಿ ಪರಿಣಮಿಸಿತ್ತು. ಆದರೆ, ಇದೀಗ ತಾಯಿ ಮಗನಿಗೆ ಕಿರುಕುಳ ನೀಡಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು  ವಿಶೇಷ ತನಿಖಾ ತಂಡ ಹೈಕೋರ್ಟ್ ಗೆ  ವರದಿ ನೀಡಿದೆ.

ತಕ್ಕನಂತಪುರಂನ ಕಡಕ್ಕಾವೂರಿನ  ಪದವೀಧರ ಯುವತಿಯೊಬ್ಬರು ಟೆಂಪೋ ಕ್ಲೀನರ್ ಓರ್ವನನ್ನು ಪ್ರೀತಿಸುತ್ತಿದ್ದರು. ಅವರಿಗೆ ನಾಲ್ವರು ಮಕ್ಕಳಾದ ಬಳಿಕ ಪತಿ ವಿದೇಶಕ್ಕೆ ತೆರಳಿದ್ದ. ವಿದೇಶದಲ್ಲಿ ಆತನಿಗೆ ಮಹಿಳೆಯೊಬ್ಬಳು ಪರಿಚಯವಾಗಿದ್ದು, ಆಕೆಯ ಜೊತೆಗೆ ಆತ ಅಲ್ಲೇ ಸಂಬಂಧ ಮುಂದುವರಿಸಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿಯ ನಡುವೆ ಸಂಬಂಧ ಹದಗೆಟ್ಟಿದೆ. ಈ ನಡುವೆ ಮಹಿಳೆಯ 13 ವರ್ಷ ವಯಸ್ಸಿನ 2ನೇ ಮಗ ವಿದೇಶದಲ್ಲಿದ್ದ ತನ್ನ ತಂದೆಯ ಬಳಿಗೆ ತೆರಳಿದ್ದ. ಅಲ್ಲಿ ತನ್ನ ತಾಯಿಯ ವಿರುದ್ಧ ಗಂಭೀರವಾದ ಆರೋಪವೊಂದನ್ನು ಮಾಡಿದ್ದ. ತಾಯಿ ತಾನು 5 ವರ್ಷದಲ್ಲಿರುವಾಗಿನಿಂದಲೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಳು ಎಂದು ಹೇಳಿದ್ದನು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತನ್ನ ಪತ್ನಿಯ ವಿರುದ್ಧವೇ ಲೈಂಗಿಕ ಕಿರುಕುಳದ ದೂರನ್ನು ದಾಖಲಿಸಿದ್ದ. ಈ ದೂರಿನನ್ವಯ ಡಿಸೆಂಬರ್ 28ರಂದು ಮಗುವಿನ ತಾಯಿಯನ್ನು ಬಂಧಿಸಲಾಗಿತ್ತು. 27 ದಿನಗಳ ಕಾಲ ತಾಯಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತು. ಜೈಲಿನಲ್ಲಿ ಕೊಳೆಯುತ್ತಿದ್ದರು.

ಈ ಪ್ರಕರಣವನ್ನು ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್ ಐಟಿ) ಇದೀಗ  ತಿರುವನಂತಪುರಂ ನ್ಯಾಯಾಲಯದಲ್ಲಿ  ವರದಿ ಸಲ್ಲಿಸಿದೆ. ತಾಯಿಯು ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು  ಡಿಸಿಪಿ ದಿವ್ಯಾ ವಿ ಗೋಪಿನಾಥ್ ನೇತೃತ್ವದ ತನಿಖಾ ತಂಡ ಕೋರ್ಟ್ ಗೆ ತಿಳಿಸಿದೆ.

ಇನ್ನೂ ಈ ಪ್ರಕರಣದಲ್ಲಿ ಸಿಲುಕಿ ಮಾನಸಿಕವಾಗಿ ಜರ್ಜರಿತರಾಗಿದ್ದ ತಾಯಿ, ತಾನು ನಿರಪರಾಧಿ ಎನ್ನುವ ಸತ್ಯ ತಿಳಿದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.  ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ ತನ್ನ ಮಾಜಿ ಪತಿಯ ವಿರುದ್ಧ ತಾನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇನ್ನೂ ತನ್ನ ತಾಯಿಯ ಮೇಲೆಯೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಮಗ ಈ ಬಗ್ಗೆ ಪ್ರತಿಕ್ರಿಯಿಸಿ,  ತನ್ನ ತಾಯಿಯ ಬಗ್ಗೆ ನಾನು ನೀಡಿದ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾನೆ ಎಂದು ಮಲಯಾಲಂ ಮಾಧ್ಯಮಗಳು ವರದಿ ಮಾಡಿವೆ.

ಇನ್ನೂ ಈ ಪ್ರಕರಣದಲ್ಲಿ ಸುಳ್ಳು ದೂರು ದಾಖಲಿಸಿದ ಮಹಿಳೆಯ ಪತಿ ಹಾಗೂ ಆತುರಾತುರವಾಗಿ ಮಹಿಳೆಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version