ತಾಯಿಯ ಎದೆ ಹಾಲು ಕುಡಿಯುತ್ತಲೇ ಸಾವಿಗೀಡಾದ ಮಗು

25/06/2021
ಇಡುಕ್ಕಿ: ತಾಯಿಯ ಎದೆ ಹಾಲು ಕುಡಿಯುತ್ತಿರುವಾಗಲೇ ಮಗುವೊಂದು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂ ಕರುಣಪುರಂನಲ್ಲಿ ನಡೆದಿದೆ.
ಜಿಜಿನ್-ತಿನೋಲ್ ದಂಪತಿಯ ಎರಡೂವರೆ ತಿಂಗಳ ಮಗು ಎದೆ ಹಾಲು ಕುಡಿಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಮೂರ್ಛೆ ಹೋಗಿದೆ. ಇದರಿಂದ ಆತಂಕಕ್ಕೊಳಗಾದ ದಂಪತಿ ತಕ್ಷಣವೇ ಚೆಟ್ಟುಕುಜಿಯ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ.
ಆದರೆ ಮಗುವನ್ನು ಪರಿಶೀಲಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಮಗುವಿನ ಸಾವಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಪೊಲೀಸರು ಅಸ್ವಾಭಾವಿಕ ಮರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.