ತಾಯಿಯ ಕಣ್ಣೆದುರೇ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ದುಷ್ಟರು! - Mahanayaka
12:30 AM Wednesday 10 - September 2025

ತಾಯಿಯ ಕಣ್ಣೆದುರೇ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ದುಷ್ಟರು!

haryana
13/08/2021

ಹರ್ಯಾಣ: ತಾಯಿಯ ಕಣ್ಣೆದುರೇ ಇಬ್ಬರು ಹೆಣ್ಣು ಮಕ್ಕಳನ್ನು ನಾಲ್ವರು ಆರೋಪಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ವಿಷ ನೀಡಿ ಹತ್ಯೆ ಮಾಡಿದ ಘಟನೆ ಹರ್ಯಾಣದ ಸೋನಿಪತ್ ನಲ್ಲಿ ನಡೆದಿದ್ದು, 11 ಹಾಗೂ 15 ವರ್ಷ ವಯಸ್ಸಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ.


Provided by

ಬಿಹಾರ ಮೂಲದ ನಾಲ್ವರು ಕೂಲಿ ಕಾರ್ಮಿಕ ಯುವಕರು ಮಹಿಳೆಯ ಮನೆಯ ಸಮೀಪವೇ ವಾಸಿಸುತ್ತಿದ್ದರು. ಮಹಿಳೆಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಯುವಕರು ಅಡುಗೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಘಟನೆ ನಡೆದ ದಿನ ರಾತ್ರಿ ತಮ್ಮ ಹೆಣ್ಣು ಮಕ್ಕಳು ಜೋರಾಗಿ ಕಿರುಚುತ್ತಿರುವ ಸದ್ದು ಕೇಳಿ ನಿದ್ದೆಯಿಂದ ಎದ್ದ ಮಹಿಳೆ ತನ್ನ ಮಕ್ಕಳ ರೂಮ್  ಬಳಿಗೆ ಬಂದಿದ್ದು, ಈ ವೇಳೆ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಕಿಟಕಿಯಿಂದ ನೋಡಿದಾಗ ತನ್ನ ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿರುವುದನ್ನು ನೋಡಿದ್ದಾರೆ. ಆದರೆ, ಅವರಿಂದ ಏನೂ ಮಾಡಲು ಸಾಧ್ಯವಾಗಿರಲಿಲ್ಲ.

ಬಾಲಕಿಯರನ್ನು ಅತ್ಯಾಚಾರ ನಡೆಸಿದ ಬಳಿಕವೂ ಸುಮ್ಮನಿರದ ಯುವಕರು ಬಾಲಕಿಯರಿಗೆ ಬಲವಂತವಾಗಿ ಕೀಟ ನಾಶಕವನ್ನು ಕುಡಿಸಿದ್ದು, ಇನ್ನೂ ಈ ವಿಚಾರ ಯಾರಿಗಾದರೂ ಹೇಳಿದರೆ, ನಿನ್ನ ಇಬ್ಬರು ಗಂಡು ಮಕ್ಕಳನ್ನು ಕೂಡ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಯಾರಾದರೂ ಕೇಳಿದರೆ ಮಕ್ಕಳು ಹಾವು ಕಡಿದು ಸಾವನ್ನಪ್ಪಿದ್ದಾರೆ ಎಂದು ಹೇಳುವಂತೆ ಆರೋಪಿಗಳು ಹೇಳಿದ್ದಾರೆ.

ಆರೋಪಿಗಳ ಬೆದರಿಕೆಯಿಂದ ಹೆದರಿದ ಮಹಿಳೆ ಆಸ್ಪತ್ರೆಯಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ ಎಂದೇ ಹೇಳಿದ್ದಾಳೆ. ಆದರೆ, ಮಕ್ಕಳ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯರ ಗಮನಕ್ಕೆ ಬಂದಿದ್ದು, ಮಹಿಳೆಯನ್ನು ಇದರ ಬಗ್ಗೆ ವಿಚಾರಣೆ ನಡೆಸಿದಾಗ ಆಕೆ ಸತ್ಯ ಹೇಳಿದ್ದಾಳೆ. ಜೊತೆಗೆ ತನ್ನ ಗಂಡು ಮಕ್ಕಳನ್ನೂ ಅವರು ಕೊಂದು ಹಾಕಬಹುದು ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬಿಗ್ ನ್ಯೂಸ್: ಕೊರೊನಾ ನಿಯಂತ್ರಣಕ್ಕೆ ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್?

ಸಹೋದರನೇ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ: ಪೊಲೀಸರ ಮೊರೆ ಹೋದ ಯುವತಿ

ಕಾಂಗ್ರೆಸ್ ನವರು ಕುಡುಕ ಸೂ*** ಮಕ್ಕಳು ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ

ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ!

ಮೊದಲು ಕ್ರೀಡಾಂಗಣಕ್ಕೆ ಇಟ್ಟಿರುವ ಮೋದಿ ಹೆಸರನ್ನು ಬದಲಾವಣೆ ಮಾಡಲಿ | ಸಿ.ಟಿ.ರವಿಗೆ ಸಿದ್ದರಾಮಯ್ಯ ಸವಾಲು

ಇತ್ತೀಚಿನ ಸುದ್ದಿ