ತಾಯಿಯನ್ನು ತಂದೆ ಕೊಂದ, ತಂದೆಯನ್ನು ಮಗ ಕೊಂದ | ಏನಿದು ಘಟನೆ? - Mahanayaka

ತಾಯಿಯನ್ನು ತಂದೆ ಕೊಂದ, ತಂದೆಯನ್ನು ಮಗ ಕೊಂದ | ಏನಿದು ಘಟನೆ?

kolara kgf news
30/06/2021

ಕೋಲಾರ:  ಹೆತ್ತ ತಾಯಿಯನ್ನು ಹತ್ಯೆ ಮಾಡಿದ್ದ ತಂದೆಯನ್ನು  ಮಗನೇ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದ್ದು,  15 ವರ್ಷಗಳ ಹಿಂದೆ ತಾಯಿಯನ್ನು ಕೊಂದು ಸೆರೆ ವಾಸದ ಬಳಿಕ ಮನೆಗೆ ಬಂದಿದ್ದ ತಂದೆಯನ್ನು ಮಗನೇ ಹತ್ಯೆ ಮಾಡಿದ್ದಾನೆ.

ಕೋಲಾರ ಜಿಲ್ಲೆಯ ಕೆಜಿಎಫ್ ಪಟ್ಟಣದ ಮಾರಿಕುಪ್ಪಂನ ನಿವಾಸಿ 52 ವರ್ಷ ವಯಸ್ಸಿನ ರಾಜೇಂದ್ರ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾರೆ. 30 ವರ್ಷ ವಯಸ್ಸಿನ ಮಗ ಕಾರ್ತಿಕ್ ತನ್ನ ತಂದೆಯನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ತಂದೆ ರಾಜೇಂದ್ರ 15  ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಹತ್ಯೆ ಮಾಡಿ ,14 ವರ್ಷ ಸೆರೆವಾಸ ಅನುಭವಿಸಿ ಬಂದಿದ್ದ ತಂದೆಯನ್ನು ಮಾರಿಕುಪ್ಪಂ ಬಳಿ ಇರುವ ಮನೆಯ ಎದುರೇ ಮಗ ಹಾಗೂ ಆತನ ಸ್ನೇಹಿತರು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಘಟನೆ ಸಂಬಂಧ ಆರೋಪಿ ಪುತ್ರನನ್ನು ಮಾರಿಕುಪ್ಪಂ ಪೊಲೀಸರು ಬಂಧಿಸಿ, ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ತಾಯಿಯನ್ನು ತಂದೆ ಕೊಂದ ಎನ್ನುವ ಸೇಡನ್ನು ಪುತ್ರ ತೀರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ