ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಅನಾಥನಾಗಿದ್ದ | ಬಿಜೆಪಿ ಸೇರ್ಪಡೆಗೆ ಎನ್.ಮಹೇಶ್ ಪ್ರತಿಕ್ರಿಯೆ
ಮೈಸೂರು: ಬಿಎಸ್ ಪಿ ನನ್ನ ತಾಯಿ ಪಕ್ಷ ಎಂದು ನಾನು ಹೇಳಿದ್ದೆ. ಆದರೆ, ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು ಎಂದು ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪ್ರಶ್ನಿಸಿದರು.
ಶ್ರೀನಿವಾಸಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ಶಾಸಕ ಎನ್.ಮಹೇಶ್ ಅವರು ಪ್ರಸಾದ್ ಅವರನ್ನು ಭೇಟಿಯಾಗಿ ಶುಭ ಕೋರಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು? ಮಗ ಅನಾಥನಾಗಿದ್ದ. ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ನನ್ನನ್ನು ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿಎಸ್ ಪಿ ಪಕ್ಷ ಕಟ್ಟಲು ಬಳಸಿ ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ನನಗೆ ಬಿಜೆಪಿ ಪಕ್ಷವನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ ಎಂದು ಸಮರ್ಥಿಸಿದ ಎನ್.ಮಹೇಶ್, ತಾನು ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ನನ್ನ ಮತ ಬ್ಯಾಂಕ್ ತಪ್ಪುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನಷ್ಟು ಸುದ್ದಿಗಳು…
“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ
ಬಿಗ್ ನ್ಯೂಸ್: ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್
ಕೊನೆಗೂ ಕಮಲ ಮುಡಿದ ಕೊಳ್ಳೇಗಾಲ ಶಾಸಕ ಎನ್.ಮಹೇಶ್! | ಮಾಜಿ, ಹಾಲಿ ಸಿಎಂ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ
“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”
ಲಾಬಿ ಮಾಡುತ್ತಿದ್ದರೆ ನಾನೂ ಮಂತ್ರಿಯಾಗುತ್ತಿದ್ದೆ | ಗದ್ಗದಿತರಾದ ಶಾಸಕ ರೇಣುಕಾಚಾರ್ಯ
ಸಿಎಂ ರೇಸ್ ನಲ್ಲಿದ್ದ ಬೆಲ್ಲದ್ ಗೆ ಸಚಿವ ಸ್ಥಾನವೂ ಸಿಗಲಿಲ್ಲ | ಶೆಟ್ಟರ್, ಬಿಎಸ್ ವೈಗೆ ಧಿಕ್ಕಾರ ಹೇಳಿದ ಬೆಂಬಲಿಗರು