ಈ ಮೂರು ಬಗೆಯ ಟೀ ತೂಕ ಇಳಿಸಲು ಸಹಕಾರಿ! - Mahanayaka
8:28 PM Wednesday 11 - December 2024

ಈ ಮೂರು ಬಗೆಯ ಟೀ ತೂಕ ಇಳಿಸಲು ಸಹಕಾರಿ!

tea
25/08/2022

ತೂಕ ಇಳಿಸುವುದು ಸುಲಭದ ಮಾತಲ್ಲ. ಸಮಯ, ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ.  ಕಳಪೆ ಆಹಾರ, ವ್ಯಾಯಾಮದ ಕೊರತೆ, ಕೆಲವು ಔಷಧಿಗಳ ಬಳಕೆ ಮತ್ತು ಆರೋಗ್ಯ ಸಮಸ್ಯೆಗಳು  ತೂಕ ಹೆಚ್ಚಾಗಲು ಕಾರಣವಾಗಬಹುದು.

ಇಂದು ನಾವು ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತೇವೆ.  ಕೆಲವು ಪರಿಣಾಮಕಾರಿಯಾಗಿರುತ್ತವೆ.  ಆದರೆ  ಕೆಲವೊಂದು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ.

‘ಟೀ ಮತ್ತು ಪಾನೀಯಗಳು ತೂಕ  ಇಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಸಂಶೋಧನೆ ಸೂಚಿಸುತ್ತದೆ. ಚಹಾದಲ್ಲಿ ಕ್ಯಾಟೆಚಿನ್‌ ಗಳನ್ನು ಹೊಂದಿರುತ್ತದೆ.  ಇದು ದೇಹವು ಕೊಬ್ಬನ್ನು ವೇಗವಾಗಿ ಒಡೆಯಲು ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಇದೇ ತರ  ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಮೂರು ವಿಧದ ಚಹಾಗಳು ಇಲ್ಲಿವೆ.

ದಾಲ್ಚಿನ್ನಿ ಟೀ (Dalchini Tea)

ಹೆಚ್ಚು ಪೌಷ್ಟಿಕಾಂಶವುಳ್ಳ ದಾಲ್ಚಿನ್ನಿ ಚಹಾವು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.  ದಾಲ್ಚಿನ್ನಿ ಚಹಾವು ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರ ಆಂಟಿ ಇಂಫಾರ್ಮ್ ಮೆಟ್ರಿ ಗುಣಗಳು ಹೊಟ್ಟೆ ಉಬ್ಬುವುದನ್ನು ತಡೆಯುತ್ತದೆ.

ಗ್ರೀನ್ ಟೀ (Green Tea)

ಗ್ರೀನ್ ಟೀ ತೂಕ  ಕಡಿಮೆ ಮಾಡಲು ವ್ಯಾಪಕವಾಗಿ ಬಳಸಲಾಗುವ ಚಹಾಗಳಲ್ಲಿ ಒಂದಾಗಿದೆ. ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಾಗಿದೆ. ಇದು ಕೊಬ್ಬನ್ನು ಸುಡುವ ಪ್ರಮಾಣವನ್ನು  ಹೆಚ್ಚಿಸುವ ಮೂಲಕ ತೂಕ ನಷ್ಟ ಮತ್ತು ಕೊಬ್ಬು ಕರಗಲು ಸಹಾಯ ಮಾಡುತ್ತದೆ.

ಕಪ್ಪು  ಕಾಫಿ (Black Coffee)

ಬೆಳಿಗ್ಗೆ ಒಂದು ಕಪ್ ಸಿಹಿಯಿಲ್ಲದ ಬಿಸಿ ಕಾಫಿ ಕುಡಿಯುವುದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಆದರೆ ಅತಿಯಾದ ಕಾಫಿ ಸೇವನೆಯು ನಿದ್ರಾಹೀನತೆ ಮತ್ತು ಆತಂಕದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ